ಪ್ರಶಸ್ತಿಗೆ ಮೂವರು ಸಾಧಕರು ಆಯ್ಕೆ: ಮೇ.28ರಂದು ನಗರದಲ್ಲಿ ಪ್ರದಾನ

1 (7)
Published on

ಮಂಡ್ಯ: ಕರ್ನಾಟಕ ಸಂಘದಿಂದ ಕೊಡಮಾಡುವ ಪ್ರತಿಷ್ಠಿತ ವೈ.ಕೆ.ರಾಮಯ್ಯ ಕೃಷಿ ತಜ್ಞ ಪ್ರಶಸ್ತಿಗೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕು ಮಂಚೇಗೌಡನದೊಡ್ಡಿ ಗ್ರಾಮದವರೂ ಆದ ಲಾಲ್‌ಬಾಗ್‌ನ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್, ಕೃಷಿ ಪ್ರಶಸ್ತಿಗೆ ಮಂಡ್ಯ ನಗರಕ್ಕೆ ಹೊಂದಿಕೊಂಡಂತಿರುವ ದೇವೇಗೌಡನದೊಡ್ಡಿಯ ಪ್ರಗತಿಪರ ಕೃಷಿಕ ದೇವಯ್ಯ ಹಾಗೂ ಎನ್.ಆರ್.ರಂಗಯ್ಯ ಸಹಕಾರ ಪ್ರಶಸ್ತಿಗೆ ಮದ್ದೂರು ತಾಲೂಕಿಗೆ ಗೆಜ್ಜಲಗೆರೆಯ ಹಿರಿಯ ಸಹಕಾರಿ ಜಿ.ಟಿ.ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅವರು, ಮೇ.28ರಂದು ಬೆಳಗ್ಗೆ 11ಗಂಟೆಗೆ ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಮೂವರಿಗೆ ತಲಾ 10 ಸಾವಿರ ರೂ ನಗದು ಸೇರಿದಂತೆ ಪ್ರಶಸ್ತಿಯನ್ನು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ.ಪ್ರಕಾಶ್ ಕಮ್ಮರಡಿ ಪ್ರದಾನ ಮಾಡಲಿದ್ದಾರೆ. ಕರ್ನಾಟಕ ಸಂಘದ ಕಾನೂನು ಸಲಹೆಗಾರ ಎ.ಇಮ್ಮಾನ್ಯೂಯಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಉಪನ್ಯಾಸಕ ಜಯರಾಂ ಕೋಣನಹಳ್ಳಿ ಅಭಿನಂದನಾ ನುಡಿಗಳನ್ನಾಡಲಿದ್ದು, ವಾಸ್ತು ವಿನ್ಯಾಸಗಾರ ಎನ್.ಆರ್.ಮಂಜುನಾಥ್ ಹಾಗೂ ವೈ.ಕೆ.ರಾಮಯ್ಯ ಅವರ ಮಗಳು ವೈ.ಆರ್.ಚೇತನಾ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಕರ್ನಾಟಕ ಸಂಘದ ಲೋಕೇಶ್ ಚಂದಗಾಲು, ನಾಗಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net