ಮೇ.27ರಿಂದ ಕಾವ್ಯಾನುಸಂಧಾನ: ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾಹಿತಿ

1 (7)
Published on

ಮಂಡ್ಯ: ಕರ್ನಾಟಕ ಸಂಘದ ಮಹಿಳಾ ಘಟಕದಿಂದ ಪ್ರತಿ ತಿಂಗಳ ಎರಡು ಹಾಗೂ ನಾಲ್ಕನೇ ಶನಿವಾರ ಸಂಜೆ 4ಗಂಟೆಗೆ ಕವಿತೆಯ ಓದು-ವ್ಯಾಖ್ಯಾನ-ಸಂವಾದ ಶೀರ್ಷಿಕೆಯಡಿ ಕಾವ್ಯಾನುಸಂಧಾನ ಆಯೋಜಿಸಲಾಗುತ್ತಿದೆ. ಅದರಂತೆ ಮೇ.27ರಂದು ಸಂಜೆ 4.30ಕ್ಕೆ ಕರ್ನಾಟಕ ಸಂಘದ ಕೆ.ಟಿ.ಶಿವಲಿಂಗಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ತಿಳಿಸಿದರು.

ಕಾರ್ಯಕ್ರಮವನ್ನು ಸಾಹಿತಿ ಡಾ.ರಾಗೌ ಉದ್ಘಾಟಿಸಲಿದ್ದು, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳಾ ಘಟಕದ ಅಧ್ಯಕ್ಷೆ ನಾಗರೇವಕ್ಕ ಅಧ್ಯಕ್ಷತೆಯಲ್ಲಿ ಕವಯತ್ರಿ ಲಲಿತಾ ಸಿದ್ದಬವಸಯ್ಯ ಅವರ ‘ಒಂದು ಹೂವು ಹೆಚ್ಚಿಗೆ ಇಡುತೀನಿ’ ಕವಿತೆಯನ್ನು ಕವಯತ್ರಿ ಡಾ.ಶುಭಶ್ರೀ ಪ್ರಸಾದ್ ಓದಲಿದ್ದಾರೆ. ಉಪನ್ಯಾಸಕ ಕೆ.ಪಿ.ಮೃತ್ಯುಂಜಯ ವ್ಯಾಖ್ಯಾನ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಸಂಘದ ಕಾರ್ಯಚಟುವಟಿಕೆ ವಿಸ್ತರಿಸುವ ಹಾಗೂ ಹೆಚ್ಚೆಚ್ಚು ಮಹಿಳೆಯರು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಯನ್ನು ತೊಡಗಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net