ರೋಲರ್ ಸ್ಕೇಟಿಂಗ್‌ನಲ್ಲಿ ಕರಣ್ ಆಯ್ಕೆ

Published on

ಶ್ರೀರಂಗಪಟ್ಟಣ : ತಾಲೂಕಿನ ಬೆಳಗೊಳದ ಶ್ರೀ ಸ್ವಾಮಿ ನಾರಾಯಣ ಗುರುಕುಲ ಇಂಟರ್‌ನ್ಯಾಷನಲ್ ಶಾಲೆಯ 4ನೇ ತರಗತಿ ವಿದ್ಯಾರ್ಥಿ ವಿ.ಕರುಣ್ ರಾಷ್ಟ್ರ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.

ಪಟ್ಟಣದ ಪವಿತ್ರಾ ಹಾಗೂ ವಸಂತ್ ಕುಮಾರ್ ದಂಪತಿ ಪುತ್ರ ವಿ.ಕರಣ್ ಆ.24ರಂದು ಕೇರಳದ ಪಾಲಕ್ಕಾಡ್‌ನಲ್ಲಿ ನಡೆದ 14 ವರ್ಷದೊಳಗಿನ ದಕ್ಷಿಣ ವಲಯ ಶಾಲಾ ಮಟ್ಟದ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಕ್ರೀಡೆಗೆ ಆಯ್ಕೆಯಾಗಿದ್ದು ಆಯೋಜಕರು ಪದಕ ನೀಡಿ ಸನ್ಮಾನಿಸಿ ಗೌರವಿಸಿದ್ದಾರೆ. ವಿದ್ಯಾರ್ಥಿ ವಿ.ಕರಣ್ ಸಾಧನೆಯನ್ನು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ನಂದೀಶ್, ಶಾಲಾ ಆಡಳಿತ ಮಂಡಳಿ ಹಾಗೂ ಪಾಲಕರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net