ಬಂಗಾರಪೇಟೆಯಲ್ಲಿ ನಾಳೆಯಿಂದ ಕರಗ ಉತ್ಸವ

bangarpete
Published on

ಬಂಗಾರಪೇಟೆ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ದ್ರೌಪದಾಂಬಾ ದೇವಿ ಅಮ್ಮನವರ ಹೂವಿನ ಕರಗ ಮಹೋತ್ಸವವು 7 ದಿನಗಳ ಕಾಲ ನಡೆಯಲಿದ್ದು, 11 ರಂದು ಹಸಿ ಕರಗ ಮತ್ತು 13 ರಂದು ರಾತ್ರಿ ಹೂವಿನ ಕರಗ ವಿಜೃಂಭಣೆಯಿಂದ ನೆರವೇರಲಿದೆ. 7ದಿನವೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ.

ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಹೂವುಗಳಿಂದ ಅಲಂಕರಿಸಿದ ಕರಗ ಹೊತ್ತ ಪೂಜಾರಿ ದೇವಾಲಯದಿಂದ ಹೊರಬಂದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ.

ಏಳು ದಿನಗಳ ಕಾಲ ನಡೆಯುವ ಕರಗ ಮಹೋತ್ಸವದಲ್ಲಿ ಹೂವಿನ ಕರಗ ವಿಶೇಷವಾಗಿದೆ. ಬೇತಮಂಗಲದ ಪ್ರಸಿದ್ಧ ಕರಗದ ಪೂಜಾರಿ ಕೃಷ್ಣಮೂರ್ತಿ ಕರಗ ಹೊತ್ತು ಹಾವಿನ ನೃತ್ಯ, ಭರತ ನಾಟ್ಯ, ಕರಗ ತಲೆ ಮೇಲೆ ಸುತ್ತು ತಿರುಗಿಸುವುದು ಸೇರಿ ವಿಶೇಷ ನೃತ್ಯಗಳಿಂದ ನೋಡುಗರ ಗಮನ ಸೆಳೆಯುತ್ತದೆ.

ಕರಗ ಮಹೋತ್ಸವದಲ್ಲಿ ಧ್ವಜಾರೋಹಣ, ಹಸಿಕರಗ, ಹೂವಿನ ಕರಗ, ಉಟ್ಲು ಜಾತ್ರೆ, ಕಲ್ಯಾಣೋತ್ಸವ, ವಸಂತೋತ್ಸವ ಸೇರಿ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.

ಬಂಗಾರಪೇಟೆ ಕರಗ ವಹ್ನಿಕುಲ ಕ್ಷತ್ರಿಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯ ಸಮಿತಿಯಿಂದ ಆಚರಿಸಲಾಗುತ್ತಿದ್ದು, 7ದಿನ ವಿಶೇಷ ಪೂಜೆ ಆಯೋಜಿಸಲಾಗಿದೆ. ಹೂವಿನ ಕರಗ ನೋಡಲು ರಾಜ್ಯ ಸೇರಿ ಅಂತಾರಾಜ್ಯಗಳಿಂದ ಜನ ಸೇರುತ್ತಾರೆ. ಶ್ರೀ ಧರ್ಮರಾಯಸ್ವಾಮಿ ದೇವಾಲಯ ಪಕ್ಕದಲ್ಲಿ ಕರಗ ನೃತ್ಯಕ್ಕೆ ವೇದಿಕೆ ಸಿದ್ಧಪಡಿಸಲಾಗುತ್ತದೆ.

- ನಾರಾಯಣಸ್ವಾಮಿ

ಮಾಜಿ ಅಧ್ಯಕ್ಷ , ಕಾರಹಳ್ಳಿ ಗ್ರಾಪಂ, ಬಂಗಾರಪೇಟೆ

ಬೆಂಗಳೂರು ಕರಗದಂತೆ ಬಂಗಾರಪೇಟೆ ಕರಗಕ್ಕೂ ಇತಿಹಾಸವಿದೆ. ಕರಗ ನೋಡಲು ರಾಜ್ಯ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮನದ ನಿರೀೆ ಇದ್ದು, ಈಗಾಗಲೇ ಎಲ್ಲ ತಯಾರಿ ಕೈಗೊಳ್ಳಲಾಗಿದೆ.

- ಚಿನ್ನಿ ವೆಂಕಟೇಶ್​

ಉಪಾಧ್ಯಕ್ಷ, ಶ್ರೀ ಧರ್ಮರಾಯ ದೇವಾಲಯ ಸಮಿತಿ, ಬಂಗಾರಪೇಟೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net