

ನಂದಗುಡಿ: ಹೋಬಳಿಯ ತಾವರೆಕೆರೆಯ ಐತಿಹಾಸಿಕ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದ್ರೌಪದಮ್ಮನವರ 72ನೇ ಹೂವಿನ ಕರಗವು, ಶ್ರೀ ಪಟಾಲಮ್ಮ ಮತ್ತು ಶ್ರೀ ಮುತ್ಯಾಲಮ್ಮ ದೇವಿ ದೇವಾಯಲದಲ್ಲಿ ವಿಜೃಂಭಣೆಯಿಂದ ನಡೆಯಿತು. ಕರಗವು ದೇವಾಲಯದಿಂದ ರಾತ್ರಿ ಸುಮಾರು 9.40ರ ಸಮಯದಲ್ಲಿ ಹೊರಬರುತ್ತಿದ್ದಂತೆ ಭಕ್ತರೆಲ್ಲರೂ ಹರ್ಷದಿಂದ ನಮಸ್ಕರಿಸಿದರು. ಪ್ರಥಮ ಬಾರಿಗೆ ಕರಗ ಹೊತ್ತ ಪೂಜಾರಿ ಟಿ.ಎಂ. ಲಕ್ಷ್ಮೀನಾರಾಯಣ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು. ಕರಗ ಬರುವ ದಾರಿಯಲ್ಲಿ ಜನಸ್ತೋಮ ತುಂಬಿತ್ತು. ಬೆಳಗ್ಗೆ ಸುಮಾರು 9.30ಕ್ಕೆ ಅಗ್ನಿಕೊಂಡ ಪ್ರವೇಶಿಸಿದ ಕರಗಕ್ಕೆ ಮಹಾಮಂಗಳಾರತಿ ನಡೆಯಿತು. 25ದೇವರುಗಳ ಪಲ್ಲಕ್ಕಿಗಳನ್ನು ಸಾಲಾಗಿ ನಿಂತು ಭಕ್ತರು ಕಣ್ತುಂಬಿಕೊಂಡರು.