ಪಂಪಿನ ಕೆರೆಯಲ್ಲಿ ಕಮಾನು ನಿರ್ಮಾಣ

karaga
Published on

ಮಡಿಕೇರಿ:

ಮಡಿಕೇರಿಯ ಐತಿಹಾಸಿಕ ದಸರಾ ಕರಗ ಹೊರಡುವ ಪಂಪಿನ ಕೆರೆ ಬಳಿ ಕಮಾನು ನಿರ್ಮಾಣ ಕಾಮಗಾರಿ ಶುಕ್ರವಾರ ಆರಂಭ ಆಗಿದೆ. ದಸರಾಕ್ಕೆ ಮೊದಲು ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮಡಿಕೇರಿ ನಗರಸಭಾ ಅಧ್ಯಕ್ಷೆ ಕಲಾವತಿ ಮತ್ತು ಉಪಾಧ್ಯಕ್ಷ ಮಹೇಶ್ ಜೈನಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ದಸರಾಕ್ಕೆ ದಿನಗಣನೆ ಆರಂಭವಾಗಿರುವುದರಿAದ ಆದಷ್ಟು ಶೀಘ್ರ ಕಾಮಗಾರಿ ಪೂರ್ಣಗೊಳಿಸುವಂತೆ ಈ ಸಂದರ್ಭ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net