

ನಾಗಮಂಗಲ: ತಾಲೂಕಿನ ಕರಡಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಸಾಕಮ್ಮ ಮರಿಯಪ್ಪ ಹಾಗೂ ಉಪಾಧ್ಯಕ್ಷರಾಗಿ ಜಿ.ಎಂ.ಜಯಲಕ್ಷ್ಮೀ ವರದರಾಜ್ ಆಯ್ಕೆಯಾಗಿದ್ದಾರೆ.
ಬುಧವಾರ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಕಮ್ಮ ಮರಿಯಪ್ಪ ಹಾಗೂ ಸಾಕಮ್ಮ ರಾಜಣ್ಣ, ಉಪಾಧ್ಯಕ್ಷ ಸ್ಥಾನಕ್ಕೆ ಜಿ.ಎಂ.ಜಯಲಕ್ಷ್ಮೀ ಹಾಗೂ ಮಹಾಲಕ್ಷ್ಮೀ ನಾಮಪತ್ರ ಸಲ್ಲಿಸಿದರು. ಅಂತೆಯೇ ಕ್ರಮವಾಗಿ ಸಾಕಮ್ಮ ಮತ್ತು ಜಿ.ಎಂ.ಜಯಲಕ್ಷ್ಮೀಗೆ 8 ಮತ್ತು ಸಾಕಮ್ಮ ರಾಜಣ್ಣ, ಮಹಾಲಕ್ಷ್ಮೀಗೆ 7 ಮತಗಳ ಬಂದವು. ಅಂತಿಮವಾಗಿ ಒಂದೊಂದು ಮತದ ಅಂತರದಲ್ಲಿ ಗೆಲುವು ಕಂಡರು.
ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆಯನ್ನು ಸದಸ್ಯರಾದ ಬಸವೇಗೌಡ, ಡಿ.ಸಿ.ನಾಗರಾಜು, ಶಶಿರೇಖಾ, ಮಂಜುನಾಥ, ಜ್ಯೋತಿ, ನಿರ್ಮಲಾ, ಸಿಂಗಾರಿಗೌಡ, ಮುಖಂಡರಾದ ದಂಡಿಗನಹಳ್ಳಿ ಡಿ.ಶಿವಣ್ಣ, ತಟ್ಟಹಳ್ಳಿ ಉದಯ್, ಕಿರಣ್, ನರಸಿಂಹಮೂರ್ತಿ, ಹರಳಕೆರೆ ಗೋಪಿ, ಮುಳುಕಟ್ಟೆ ರಮೇಶ್, ಡಿ.ಎಚ್.ರಾಮೇಗೌಡ, ಗಿರೀಶ್, ಸಣ್ಣಮರಿ ಇತರರಿದ್ದರು.