

ಮಡಿಕೇರಿ: ಕರಡ ಗ್ರಾಮದ ಪಟ್ರಪಂಡ ಕುಟುಂಬದ ಇತಿಹಾಸ ಪೂರ್ವ ಕೈಮಡ ಪನರ್ ನವೀಕರಣಕಾರ್ಯ ಸಾಂಪ್ರದಾಯಿಕವಾಗಿ ನೆರವೇರಿತು.
ಬೆಳಿಗ್ಗೆ ಊರಿನ ಭಗವತಿ ದೇವಾಲಯದಿಂದ ಕುಟುಂಬದ ಮೂಲ ಪುರುಷರ ಲೋಹದ ಮೂರ್ತಿಯನ್ನು ಪಟ್ರಪಂಡ ಕುಟುಂಬಸ್ತರು ಕೊಡವ ಸಾಂಪ್ರದಾಯದ ಉಡುಪಿ ನೊಂದಿಗೆ ಮಹಿಳೆಯರು ತಳಿಯತಕ್ಕಿ ದೀಪದೊಂದಿಗೆ ಒಡ್ಡೋಲಗ ಸಮೇತವಾಗಿ ಸುಮಾರು ೪.೫ ಲಕ್ಷ ಖರ್ಚಿನಲ್ಲಿ ನೂತನವಾಗಿ ನವೀಕರಣಗೊಂಡ ಕುಟುಂಬದ ಕೈಮಡಕ್ಕೆ ತರಲಾಯಿತು. ಪಟ್ರಪಂಡ ಕುಟುಂಬದ ಮೂಲಪುರುಷ ಮೇದು, ಮೇಚು, ಯುದ್ಧಲ್ಲಿ ಗೆದ್ದ ಪಡೆಬೀರ ಅಪ್ಪಯ್ಯನಿಗೆ ರಾಜ ಒಡಿಕತ್ತಿ ನೀಡಿ ಗೌರವಿಸಿದರು. ಅವರ ಗೋರಿಗೆ ಗೌರವ ಸಲ್ಲಿಸಲಾಯಿತು.
ಹಲವು ಪೂಜಾ ವಿಧಿವಿಧಾನ, ಹೋಮಹವನಗಳೊಂದಿಗೆ ಕೇರಳದಿಂದ ತಂದ ಮೂಲಪುರುಷನ ಮೂರ್ತಿಯನ್ನು ಗುಡಿಯೊಳಗೆ ಪ್ರತಿಷ್ಠಾನಾ ಕಾರ್ಯನೆರವೇರಿತು. ಸಂಜೆ ಕುಟುಂಬಸ್ತರ ಸಮ್ಮುಖದಲ್ಲಿ ಗುರುನೆಲೆಯಲ್ಲಿ ಮೀದಿನೀರು ಇಡಲಾಯಿತು. ಕುಟುಂಬದ ಕೈಮಡ ಹಳೆಯದಾಗಿದ್ದು ಎಲ್ಲರ ಸಹಕಾರದಿಂದ ಕೈಮಡ ನವೀಕರಣ ಕಾರ್ಯ ಮಾಡಲಾಗಿದೆಂದು ಪಟ್ರಪಂಡ ಕುಟುಂಬ ಸಮಿತಿಯ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ ತಿಳಿಸಿದರು.
ಪಟ್ರಪಂಡ ಕುಟುಂಬದ ಪಟ್ಟೆದಾರ ಪಳನಿ ಚಿಣ್ಣಪ್ಪ, ಕುಟುಂಬಸ್ಥರು, ಊರಿನವರು ತವರುಮನೆಯ ಮಹಿಳೆಯರು ಭಾಗವಹಿಸಿದ್ದರು. ನಂತರ ಪುರುಷರು ಮಹಿಳೆಯರು ಮಕ್ಕಳು ವಾಲಗಕ್ಕೆ ಹೆಜ್ಜೆಹಾಕಿ ಕುಣಿದರು.