ಸ್ವಾತಂತ್ರ ಹೋರಾಟಕ್ಕೆ ಕರಭಂಟನಾಳ ಶ್ರೀಗಳ ಕೊಡುಗೆ ಸ್ಮರಣೀಯ

Karabhantana Sri's contribution to the freedom struggle is memorable
ಹೂವಿನಹಿಪ್ಪರಗಿ ಸಮೀಪದ ಕರಭಂಟನಾಳ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಲಿಂ.ಶಂಕ್ರಯ್ಯ ಚನಸಂಗಯ್ಯ ಹಿರೇಮಠ, ಶ್ರೀ ಮಡಿವಾಳಯ್ಯ ಅವರ ದತ್ತಿ ನಿಧಿ ಕಾರ್ಯಕ್ರಮವನ್ನು ಗಣ್ಯರು, ಶ್ರೀಗಳು ಉದ್ಘಾಟಿಸಿದರು. ಜಯಸಿದ್ಧೇಶ್ವರ ಶಿವಾಚಾರ್ಯರು, ಡಾ.ಬಸವರಾಜ ಹಡಪದ,
Published on

ಹೂವಿನಹಿಪ್ಪರಗಿ: ಸ್ವಾತಂತ್ರ ಪೂರ್ವದಲ್ಲಿ ಸಾಮಾಜಿಕ, ಧಾರ್ಮಿಕ ಕೆಲಸಗಳ ಜೊತೆಗೆ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲಿ ಕರಭಂಟನಾಳದ ಗುರು ಗಂಗಾಧೇಶ್ವರ ಮಹಾಸ್ವಾಮಿಗಳು ಸಹ ಒಬ್ಬರು ಎಂದು ಹಿರೂರು ಮಠದ ಜಯಸಿದ್ಧೇಶ್ವರ ಶಿವಾಚಾರ್ಯರು ಹೇಳಿದರು.

ಸಮೀಪದ ಕರಭಂಟನಾಳ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿಷತ್​ ಬಸವನಬಾಗೇವಾಡಿ ಹಾಗೂ ಅರುಣೋದಯ ಮಂಗಳ ಪ್ರೌಢಶಾಲೆ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಲಿಂ.ಶಂಕ್ರಯ್ಯ ಚನಸಂಗಯ್ಯ ಹಿರೇಮಠ, ಮಡಿವಾಳಯ್ಯರ ದತ್ತಿನಿಧಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಕರಭಂಟನಾಳ ಗ್ರಾಮಕ್ಕೂ ಸ್ವಾತಂತ್ರ ಹೋರಾಟಕ್ಕೂ ಬಹಳ ಅವಿನಾಭಾವ ಸಂಬಂಧವಿದೆ ಎಂದರು.

ಡಾ.ಬಸವರಾಜ ಹಡಪದ ಉಪನ್ಯಾಸ ನೀಡಿ, ಸುರುಪುರದ ನಾಲ್ವಡಿ ವೆಂಕಟಪ್ಪ ನಾಯಕರು ಬ್ರಿಟಿಷರೊಂದಿಗೆ ಹೋರಾಡಲು ಗುರು ಗಂಗಾಧೇಶ್ವರ ಸ್ವಾಮೀಜಿ ಅವರು ಶಕ್ತಿ ತುಂಬಿ ತರಬೇತಿ ನೀಡಿದ್ದಾರೆ. ಆದರೆ ಇತಿಹಾಸಕಾರರು ಎಲ್ಲಿಯೂ ಇದರ ಉಲ್ಲೇಖ ಮಾಡಿಲ್ಲ ಎಂಬುದು ಬೇಸರದ ಸಂಗತಿಯಾಗಿದೆ. ಯುವ ಸಮೂಹ ಇದನ್ನು ಅರಿಯಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ನೇತೃತ್ವದ ವಹಿಸಿದ್ದ ಶಿವಕುಮಾರ ಸ್ವಾಮೀಜಿ ಮಾತನಾಡಿದರು. ಕರಭಂಟನಾಳದ ವೇದಮೂರ್ತಿ ಚನ್ನಸಂಗಯ್ಯ ಸ್ವಾಮೀಜಿ ಹಿರೇಮಠ, ತಾಲೂಕು ಕನ್ನಡ ಸಾಹಿತ್ಯ ಪರಿಷತ್​ ಅಧ್ಯ ಶಿವಾನಂದ ಡೋಣೂರ, ಪಿ.ಕೆ.ಕೋಲಕಾರ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯ ಅಜೀಜ್​ ಬಳಬಟ್ಟಿ, ವಿಠ್ಠಲ ಬಿರಾದಾರ, ಶಿವಾನಂದ ಬಿರಾದಾರ, ಎಂ.ಎಸ್​.ಚಿಮ್ಮಲಗಿ, ಎಂ.ಎಂ. ಅಂಗಡಗೇರಿ, ದತ್ತಿ ಸಂಚಾಲಕರಾದ ಭೀಮರಾಯ ಚಕ್ರಮನಿ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net