ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು: ಶಂಕರಗೌಡ ಜಯನಗೌಡ

18GDG06(2)
Published on

ವಿಜಯವಾಣಿ ಸುದ್ದಿಜಾಲ ಗದಗ
ಶಾಲಾ ಶಿಣ ಇಲಾಖೆ ಹಾಗೂ ಆಂಗ್ಲ ಉಪನ್ಯಾಸಕರ ವೇದಿಕೆ ಸಹಯೋಗದಲ್ಲಿ ಸೋಮವಾರ ಪದವಿ ಪೂರ್ವ ಕಾಲೇಜುಗಳ ವಿದ್ಯಾಥಿರ್ಗಳಿಗಾಗಿ "ಹಸಿರು ಯಾನ' ಕಾರ್ಯಕ್ರಮವನ್ನು ಕಪ್ಪತ್ತಗುಡ್ಡದಲ್ಲಿ ಆಯೋಜಿಸಿಲಾಗಿತ್ತು.
ಕಾರ್ಯಕ್ರಮದಲ್ಲಿ ಪರಿಸರವಾದಿಗಳು ಹಾಗೂ ಆಯುರ್ವೇದ ಪಂಡಿತ ಶಂಕರಗೌಡ ಜಯನಗೌಡರ ಭಾಗವಹಿಸಿ ಮಾತನಾಡಿ, ವಿದ್ಯಾಥಿರ್ಗಳು ಕಪ್ಪತ್ತಗುಡ್ಡದಲ್ಲಿ ಲಭ್ಯವಿರುವ ವಿವಿಧ ಔಷಧಿ ಸಸ್ಯ ಮರಗಳು ಹಾಗೂ ಅವುಗಳ ಉಪಯುಕ್ತತೆಯನ್ನು ಅರಿತುಕೊಳ್ಳಬೇಕು. ಸಕ್ಕರೆ ಕಾಯಿಲೆ, ಮಲಬದ್ಧತೆ, ಅಲಜಿರ್, ಅಶಕ್ತತೆ, ಆಸಿಡಿಟಿಗಳಂತಹ ಹಲವು ರೋಗಗಳನ್ನು ಇಲ್ಲಿರುವ ಔಷಧಿಗಳಿಂದ ಗುಣಪಡಿಸಬಹುದು. ಎಪ್ಪತ್ತು ಗಿರಿಗಿಂತ ಕಪ್ಪತ್ತಗಿರಿ ಮೇಲು ಎಂಬುದನ್ನು ವಿದ್ಯಾಥಿರ್ಗಳು ಅರಿತುಕೊಳ್ಳಬೇಕು ಎಂದರು.
ಕಪ್ಪತ್ತಗುಡ್ಡ ಹಿತರಣಾ ಸಮಿತಿಯ ಅಧ್ಯ ಭರಮಪ್ಪ ಕಿಲಾರಿ ಮಾತನಾಡಿ, ಮೂಡನಂಭಿಕೆ, ದುರಾಸೆಗಳಿಂದ ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಲಾಗುತ್ತಿತ್ತು. ರಾತ್ರಿ ವೇಳೆ ಲಾರಿಗಳಿಂದ ಅದಿರನ್ನು ತುಂಬಲಾಗುತ್ತಿತ್ತು. ಸಾ ಹೇಳಲು ಹೈಕೋರ್ಟ ಮೆಟ್ಟಿಲು ಏರಿದ ಪ್ರಸಂಗವೂ ಇದೆ. ಇವೆಲ್ಲವನ್ನು ಸಮಿತಿಯು ಸಮರ್ಥವಾಗಿ ಎದುರಿಸಿದೆ. ಕಪ್ಪತ್ತಗುಡ್ಡದ ಪ್ರಾಮುಖ್ಯತೆಯನ್ನು ಅರಿತು ಅದರ ರಣೆಗಾಗಿ ತಾವು ಕೈಜೋಡಿಸಬೇಕು ಎಂದರು.
ರಮಾಕಾಂತ ದೊಡ್ಡಮನಿ ಮಾತನಾಡಿ, ಪ್ರಥಮ ಹಾಗೂ ದ್ವೀತಿಯ ಪಿಯುಸಿ ವಿದ್ಯಾಥಿರ್ಗಳು ತಮ್ಮ ಆಂಗ್ಲ ಪಠ್ಯಪುಸ್ತಕದಲ್ಲಿ ಔಷಧಿಯ ಸಸ್ಯಗಳು ಹಾಗೂ ಜೀವ ವೈವಿಧ್ಯತೆಯ ಕುರಿತ ಪಾಠಗಳನ್ನು ಓದುತ್ತಿರುವದರಿಂದ ಜೀವ ವೈವಿಧ್ಯತೆಯ ಮಧ್ಯದಲ್ಲಿ ಜೀವ ವೈವಿಧ್ಯತೆಯ ಪಾಠಮಾಡಬೇಕೆಂಬ ಉದ್ದೇಶದಿಂದ "ಹಸಿರು ಯಾನ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಸವರಾಜ ಗಿರಿತಮ್ಮಣ್ಣವರ, ವಿ. ಬಿ. ಹುಬ್ಬಳ್ಳಿ, ಶ್ರೀನಿವಾಸ ಬಡಿಗೇರ, ಭರಮಪ್ಪ ಕಿಲಾರಿ, ಸಂಗಮೇಶ ನೀರಲಗಿ, ಶಶಿಧರ ಕುರಿ, ರಾಚಪ್ಪ ಚವಡಿ, ಶ್ರೀದೇವಿ ಹಿರೇಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net