

ಕಪ್ಪಸೋಗೆ: ಸಂಘಕ್ಕೆ ಹೆಚ್ಚು ಹಾಲು ಸರಬರಾಜು ವಾಡುವ ಸದಸ್ಯರನ್ನು ಗುರುತಿಸಿ ಪ್ರತಿವರ್ಷ ಬಹುವಾನ ನೀಡಲಾಗುತ್ತಿದೆ ಎಂದು ಸಂದ ಅಧ್ಯಕ್ಷ ಕೆ.ವಿ.ನಾಗೇಂದ್ರ ತಿಳಿಸಿದರು.
ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಗುರುವಾರ ಉದ್ಘಾಟಿಸಿ ವಾತನಾಡಿದರು.
ನಮ್ಮ ಸಂಘವು ಈ ಬಾರಿ 1.64 ಲಕ್ಷ ರೂ. ನಿವ್ವಳ ಲಾಭವನ್ನು ಪಡೆದಿದೆ. ಇದಕ್ಕೆ ಮುಖ್ಯ ಕಾರಣ ಹಾಲು ಉತ್ಪಾದಕರು. ಗುಣಮಟ್ಟದ ಹಾಲನ್ನ ಸಂಕ್ಕೆ ಸರಬರಾಜು ವಾಡಿದಾಗ ವಾತ್ರ ಸಂಘವ ಅಭಿವೃದ್ಧಿಗೊಳ್ಳುತ್ತದೆ. ಸಂಘದಲ್ಲಿ ಹಾಲು ಉತ್ಪಾದನೆ ಹೆಚ್ಚಿಸುವ ಹಿನ್ನೆಲೆ ಕಳೆದ ವರ್ಷದಿಂದ ಅತಿ ಹೆಚ್ಚು ಹಾಲು ಸರಬರಾಜು ವಾಡುವ ಇಬ್ಬರಿಗೆ ಬಹುವಾನ ನೀಡಲಾಗುತ್ತಿದೆ. ಈ ಬಾರಿ ಪರಮೇಶ್ ಮತ್ತು ಶಂಕರಪ್ಪ ಎಂಬ ಹಾಲು ಉತ್ಪಾದಕರು ಅತೀ ಹೆಚ್ಚು ಹಾಲು ಸರಬರಾಜು ವಾಡಿದ್ದಾರೆ. ಇವರಿಗೆ ಸಂದ ವತಿಯಿಂದ ಬಹುವಾನ ನೀಡಲಾಗಿದ್ದು. ಇದರಿಂದ ಪ್ರೇರಿತಗೊಂಡು ಮತ್ತಷ್ಟು ಉತ್ಪಾದಕರು ಹೆಚ್ಚು ಹಾಲು ಉತ್ಪಾದನೆ ವಾಡಲು ಸಹಕಾರಿಯಾಗುತ್ತದೆ ಎಂದರು.
ಉಪಾಧ್ಯಕ್ಷ ಕೆ.ಎಸ್.ದೇವರಾಜಪ್ಪ, ನಿರ್ದೇಶಕರಾದ ಷಡಕ್ಷರಿ, ನಂಜಪ್ಪ, ಸೋಮನಾಯಕ, ತಿಮ್ಮನಾಯಕ, ಚಿಕ್ಕನಾಯಕ, ಸಿದ್ದರಾಜು, ಮಹದೇವಯ್ಯ, ಶಿವಮ್ಮ, ದೊಡ್ಡಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ರಾಜಶೇಖರ್, ಹಾಲು ಪರೀಕ್ಷಕ ಶಿವಕುವಾರ್, ಕಾರ್ಯಕರ್ತ ಕುವಾರ್ ಸೇರಿದಂತೆ ಹಾಲು ಉತ್ಪಾದಕರು ಹಾಜರಿದ್ದರು.