ಕಪ್ಪಲಿ ಬಸವೇಶ್ವರ ಜಾತ್ರಾ ಮಹೋತ್ಸವ

jaatre
Published on

ಶಿರೋಳ: ಶ್ರಾವಣ ಮಾಸದ ಮೂರನೇ ಸೋಮವಾರ ಪ್ರಯುಕ್ತ ಸೆ. 4ರಂದು ಕಪ್ಪಲಿ ಗ್ರಾಮದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ನಡೆಯಲಿದೆ.

ಬೆಳ್ಳಗ್ಗೆ 6 ಗಂಟೆಗೆ ಬಸವಣ್ಣನ ಮೂರ್ತಿಗೆ ರುದ್ರಾಬಿಷೇಕ, ಸಂಜೆ 5 ಗಂಟೆಗೆ ಭೈರನಹಟ್ಟಿ ದೊರೆಸ್ವಾಮಿಮಠದ ಶಾಂತಲಿಂಗ ್ವಾಮಿಜಿ, ಶಿರೋಳ ಹಿರೇಮಠದ ವೀರಯ್ಯ ಶಾಸ್ತ್ರೀಗಳು, ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಸಿ.ಸಿ. ಪಾಟೀಲ, ಮಹಾದೇವಯ್ಯ ಕರಮಡಿ, ಮಾಜಿ ಶಾಸಕ ಬಿ.ಆರ್.ಯಾವಗಲ್, ತಹಸೀಲ್ದಾರ್ ಶ್ರೀಶೈಲ ತಳವಾರ, ಸಿಪಿಐ ಮಲ್ಲಯ್ಯ ಮಠಪತಿ ಇತರರು ಪಾಲ್ಗೊಳ್ಳುವರು. ರಾತ್ರಿ 9.30ಕ್ಕೆ ಶಿವಮೊಗ್ಗದ ಶ್ರೀ ಗುರು ಮೆಲೋಡಿಯಸ್ ಮತ್ತು ಬಾಳ ಬೆಳಗುಂದಿ ಜಾನಪದ ಗಾಯಕರಿಂದ ರಸಮಂಜರಿ ಕಾರ್ಯಕ್ರಮದ ಜರುಗಲಿದೆ ಎಂದು ಕಪ್ಪಲಿ ಗ್ರಾಮದ ಶ್ರೀಬಸವೇಶ್ವರ ಸಕಲ ಸದ್ಭಕ್ತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net