ರಕ್ತದಾನ, ನೇತ್ರ ತಪಾಸಣೆ ಶಿಬಿರ

PTR_23 MAR_3
Published on

ವಿಟ್ಲ: ಕನ್ಯಾನ ಶ್ರೀ ಸರಸ್ವತಿ ವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಭಾನುವಾರ ನಡೆಯಿತು. ಪುತ್ತೂರು ರೋಟರಿ ಕ್ಲಬ್‌ನ ಡಾ.ಎಂ.ಸದಾಶಿವ ಭಟ್ ಉದ್ಘಾಟಿಸಿದರು.

ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ್ ನೀರ್ಪಾಜೆ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ನೇತ್ರಾಲಯದ ಡಾ.ನಿರಂಜನ್ ನೇತ್ರದಾನದ ಬಗ್ಗೆ, ರೋಟರಿ ರಕ್ತನಿಽಯ ಸಜಿನ್ ಮಾರ್ಟಿಸ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ರಕ್ತದಾನದಲ್ಲಿ ೬೩ ಮಂದಿ ಭಾಗವಹಿಸಿದರು. ೭೩ ಮಂದಿ ನೇತ್ರ ತಪಾಸಣೆ ಮಾಡಿಸಿಕೊಂಡರು.

ಕನ್ಯಾನ ಗುರು ಎಜುಕೇಶನ್ ಟ್ರಸ್ಟ್, ಶ್ರೀ ಸರಸ್ವತಿ ವಿದ್ಯಾಲಯ, ಮಂಗಳೂರು ಹವ್ಯಕ ಮಂಡಲಾಂತರ್ಗತ ಕನ್ಯಾನ ಹವ್ಯಕ ವಲಯ, ಪುತ್ತೂರು ರೋಟರಿ ಕ್ಲಬ್, ರೋಟರಿ ಕ್ಯಾಂಪ್ಕೊ ಬ್ಲಡ್ ಸೆಂಟರ್, ರೋಟರಿ ಕ್ಲಬ್ ಪುತ್ತೂರು ಕಣ್ಣಿನ ಆಸ್ಪತ್ರೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣೆ ವಿಭಾಗ) ಮಂಗಳೂರು, ಡಾ.ಪಿ.ದಯಾನಂದ ಪೈ ಮತ್ತು ಸತೀಶ್ ಪೈ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು ಸೆಂಚುರಿ ಗ್ರೂಪ್, ಕನ್ಯಾನದ ಶ್ರೀ ಸರಸ್ವತಿ ಕ್ರಿಕೆಟರ್‍ಸ್, ರಕ್ತಬಂಧ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಶಿಬಿರ ನಡೆಯಿತು.

ಹವ್ಯಕ ಮಹಾಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ ಈಶ್ವರಪ್ರಸಾದ್, ಮಂಗಳೂರು ಹವ್ಯಕ ಮಂಡಲ ಉಪಾಧ್ಯಕ್ಷ ರಾಜಶೇಖರ ಭಟ್ ಕಾಕುಂಜೆ, ಸೇವಾ ಪ್ರಧಾನ ಸುರೇಶ್ ಭಟ್ ಶಾಂತಿಮೂಲೆ, ರಕ್ತಬಂಧದ ಸಂಯೋಜಕ ಭಾಸ್ಕರ ಭಟ್ ಹೊಸಮನೆ, ಕನ್ಯಾನ ಶ್ರೀ ಸರಸ್ವತಿ ಕ್ರಿಕೆಟರ್‍ಸ್‌ನ ರಾಧಾಕೃಷ್ಣ, ಕನ್ಯಾನ ಹವ್ಯಕ ವಲಯ ಕಾರ್ಯದರ್ಶಿ ನವೀನ ಪಾದೆಕಲ್ಲು, ಕೋಶಾಽಕಾರಿ ರವೀಶ್ ಕಮ್ಮಜೆ ಮತ್ತಿತರರು ಉಪಸ್ಥಿತರಿದ್ದರು.

ಕನ್ಯಾನ ಹವ್ಯಕ ವಲಯ ಅಧ್ಯಕ್ಷ ರವಿಶಂಕರ ಪನೆಯಡ್ಕ ಸ್ವಾಗತಿಸಿದರು. ತೆಂಕಬಲು ಸೂರ್ಯನಾರಾಯಣ ವಂದಿಸಿದರು. ವಿದ್ಯಾರ್ಥಿವಾಹಿನಿ ಪ್ರಧಾನ ಡಾ.ವಿಶ್ವೇಶ್ವರ ವಿ.ಕೆ. ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net