ರಾಮಾಯಣದಲ್ಲಿದೆ ಜೀವನ ಪಾಠ - ಡಾ. ಶಂಕರನಾರಾಯಣ ಭಟ್ ಪಳ್ಳತ್ತಡ್ಕ ಅಭಿಪ್ರಾಯ - ಭಾವರಾಮಾಯಣ ರಾಮಾವತರಣ ಪುಸ್ತಕ ಲೋಕಾರ್ಪಣೆ

PTR_29 JUN_13
Published on

ವಿಟ್ಲ: ರಾಮನಲ್ಲಿ ಪ್ರಪಂಚವೇ ಇದ್ದು, ರಾಮಾಯಣದ ಪ್ರತಿಯೊಂದು ಘಟ್ಟವೂ ಜೀವನ ಪಾಠವನ್ನು ಬೋಽಸುತ್ತದೆ. ಯುಗಗಳು ಕಳೆದರೂ ರಾಮಾಯಣ ಎಲ್ಲರಿಗೂ ಆದರ್ಶ, ಮಾರ್ಗದರ್ಶನವಾಗಿದೆ. ಸಹೋದರರು ಹೇಗೆ ನಡೆದುಕೊಳ್ಳಬೇಕೆಂಬುದನ್ನು ರಾಮಾಯಣದಲ್ಲಿ ಕಾಣಬಹುದಾಗಿದ್ದು, ಪ್ರತಿಯೊಬ್ಬರೂ ಬದುಕಿನಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಘನಪಾಠಿ ಡಾ. ಶಂಕರನಾರಾಯಣ ಭಟ್ ಪಳ್ಳತ್ತಡ್ಕ ಹೇಳಿದರು.


ಕನ್ಯಾನ ಶ್ರೀ ಸರಸ್ವತೀ ವಿದ್ಯಾಲಯದಲ್ಲಿ ಮಂಗಳೂರು ಹವ್ಯಕ ಮಂಡಲದ ವತಿಯಿಂದ ಶ್ರೀರಾಮಚಂದ್ರಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರಿಂದ ರಚಿತವಾದ ಭಾವರಾಮಾಯಣ ರಾಮಾವತರಣ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.


ಕಾರ್ಯಕ್ರಮ ಉದ್ಘಾಟಿಸಿದ ಮಂಡಲ ಪ್ರಧಾನ ಗುರಿಕ್ಕಾರ ಉದಯ ಕುಮಾರ್ ಖಂಡಿಗ ಮಾತನಾಡಿ, ರಾಮಾಯಣ ಪುಸ್ತಕದಲ್ಲಿ ಅಗಾಧವಾದ ಶಕ್ತಿಯಿದ್ದು, ಗುರುಗಳ ಭಾವನೆಯಲ್ಲಿ ಬರುವ ರಾಮಾಯಣ ಇನ್ನಷ್ಟು ವಿಶೇಷವಾಗಿದೆ. ರಾಮಾಯಣ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪರಿಗಣಿಸುವ ರೀತಿಯಲ್ಲಿರುವ ಭಾವರಾಮಾಯಣ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದ ಪುಸ್ತಕವಾಗಿದೆ ಎಂದು ತಿಳಿಸಿದರು.


ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಘಟಿಕೋತ್ಸವದಲ್ಲಿ ಗೌರವ ಪದವಿ ಸ್ವೀಕರಿಸಿದ ಘನಪಾಠಿ ಡಾ. ಶಂಕರನಾರಾಯಣ ಭಟ್ ಪಳ್ಳತ್ತಡ್ಕ ಅವರನ್ನು ಸನ್ಮಾನಿಸಲಾಯಿತು. ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ ಅಧ್ಯಕ್ಷತೆ ವಹಿಸಿದ್ದರು. ಮಹಾಮಂಡಲ ಪ್ರಾಂತ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲ ಉಪಸ್ಥಿತರಿದ್ದರು.


ಮಂಡಲ ಯುವ ಪ್ರಧಾನ ಕೃಷ್ಣಪ್ರಮೋದ ಶರ್ಮ ಸ್ವಾಗತಿಸಿದರು. ಕನ್ಯಾನ ಶ್ರೀಗುರು ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಈಶ್ವರ ಪ್ರಸಾದ ಕನ್ಯಾನ ಪ್ರಸ್ತಾಪನೆಗೈದರು. ಕನ್ಯಾನ ವಲಯ ಅಧ್ಯಕ್ಷ ರವಿಶಂಕರ್ ಪನೆಯಡ್ಕ ವಂದಿಸಿದರು. ಮಂಡಲ ಉಪಾಧ್ಯಕ್ಷ ರಾಜಶೇಖರ ಕಾಕುಂಜೆ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net