ಕನ್ಯಾಕುಮಾರಿ ಜಿಪಂ ಪ್ರಭಾರ ಅಧ್ಯಕ್ಷೆ, ಜಯಮ್ಮ ವಿರುದ್ಧ ಅವಿಶ್ವಾಸ ಮಂಡನೆ, 17 ಹಾಜರಿ 4 ಸದಸ್ಯರು ಗೈರು

2
Published on

ಬೆಂಗಳೂರು ಗ್ರಾಮಾಂತರ: ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮಲಕ್ಷ್ಮೀನಾರಾಯಣ ವಿರುದ್ಧ ಮಂಗಳವಾರ ಜಿಪಂ ಸಭಾಂಗಣದಲ್ಲಿ ಸದಸ್ಯರು ಅವಿಶ್ವಾಸ ಮಂಡಿಸುವ ಮೂಲಕ ಕೆಲ ದಿನಗಳಿಂದ ನಡೆಯುತ್ತಿದ್ದ ಅಧ್ಯಕ್ಷ ಗಾದಿಯ ಹಗ್ಗಾ-ಜಗ್ಗಾಟಕ್ಕೆ ಮಂಗಳ ಹಾಡಿದ್ದಾರೆ.

ಪ್ರಭಾರಿಯಾಗಿ ಜಿಪಂ ಉಪಾಧ್ಯಕ್ಷೆ ಕನ್ಯಾಕುಮಾರಿ ಶ್ರೀನಿವಾಸ್ ಮುಂದಿನ 7 ತಿಂಗಳವರೆಗೆ ಅಧಿಕಾರ ಸ್ವೀಕರಿಸಿದ್ದು, ಮುಂದಿನ ಅವಧಿಯ ಅಧ್ಯಕ್ಷ ಗಾದಿಗೆ ಹೊಸಕೋಟೆಯ ಪ್ರಸಾದ್ ಹೆಸರು ಬಲವಾಗಿ ಕೇಳಿಬರುತ್ತಿದೆ.

17 ಹಾಜರಿ 4 ಗೈರು: ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಸಮ್ಮುಖದಲ್ಲಿ ನಡೆದ ಅವಿಶ್ವಾಸ ಸೂಚಕ ಸಭೆಯಲ್ಲಿ ಕಾಂಗ್ರೆಸ್‌ನ 17 ಸದಸ್ಯರು ಜಯಮ್ಮ ವಿರುದ್ಧ ಅವಿಶ್ವಾಸ ಮಂಡಿಸಿದರು. ಸದಸ್ಯರಾದ ಪುಷ್ಪಾ, ನಂಜುಂಡಯ್ಯ, ಸಿ.ನಾಗರಾಜ್ ಹಾಗೂ ಜಯಮ್ಮ ಗೈರಾಗಿದ್ದರು. ಕಾಂಗ್ರೆಸ್ ಸದಸ್ಯರ ಕೋರಂ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ನವೀನ್‌ರಾಜ್ ಅವಿಶ್ವಾಸ ಸೂಚನೆ ಅಂಗೀಕರಿಸಿದರು.

ಮುಖಂಡರು ಭಾಗಿ: ಬೆಳಗ್ಗೆ 10 ಗಂಟೆಗೆ ಸಭೆ ನಿಗದಿಯಾಗಿತ್ತು. ಸಭೆಗೂ ಮುನ್ನವೇ ಜಿಪಂನಲ್ಲಿ ಹಾಜರಿದ್ದ ಮಾಜಿ ಸಚಿವ ಕೃಷ್ಣಭೈರೇಗೌಡ, ಶಾಸಕ ಶರತ್‌ಬಚ್ಚೇಗೌಡ, ಶಾಸಕ ವೆಂಕಟರಮಣಯ್ಯ ಮತ್ತಿತರರು ಸುದೀರ್ಘ ಚರ್ಚೆ ನಡೆಸಿದರು. ಜಿಪಂನಲ್ಲಿ ಕಾಂಗ್ರೆಸ್ ಹಿಡಿತ ಬಿಗಿಗೊಳಿಸುವ ನಿಟ್ಟಿನಲ್ಲಿ ಮುಖಂಡರು ಚರ್ಚೆ ನಡೆಸಿದರು.

ಪಕ್ಷದ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ವರ್ತಿಸುವವರ ವಿರುದ್ಧ ಕಾಂಗ್ರೆಸ್ ಕ್ರಮವಹಿಸುತ್ತದೆ, ಪಕ್ಷದ ಶಿಸ್ತು ಪಾಲನೆಯಲ್ಲಿ ವಿಲವಾಗಿದ್ದರಿಂದ ಹಾಗೂ ಸದಸ್ಯರೊಂದಿಗೆ ಸಮನ್ವಯತೆ ಸಾಧಿಸದೆ ಉದಾಸೀನತೆ ಪ್ರದರ್ಶಿಸಿದ್ದರಿಂದ ಅಧ್ಯಕ್ಷರ ಬದಲಾವಣೆ ಅನಿವಾರ್ಯವಾಯಿತು. ಕೃಷ್ಣಭೈರೇಗೌಡ, ಮಾಜಿ ಸಚಿವ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಮೊದಲ ಆದ್ಯತೆ. ಈ ವಿಷಯದಲ್ಲಿ ಜಿಪಂ ಪ್ರಮುಖ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಅಧ್ಯಕ್ಷರ ಬದಲಾವಣೆ ಅನಿವಾರ್ಯವಾಗಿತ್ತು. ಇದು ಒಟ್ಟಾರೆ ಪಕ್ಷದ ತೀರ್ಮಾನವಾಗಿತ್ತು. ಮುಂದಿನ ಅವಧಿಗೆ ಬರುವ ಅಧ್ಯಕ್ಷರು ಉತ್ತಮ ಕಾರ್ಯನಿರ್ವಹಿಸುತ್ತಾರೆ ಎಂಬ ಭರವಸೆ ಇದೆ. ಶರತ್‌ಬಚ್ಚೇಗೌಡ, ಶಾಸಕ ಇದು ಪಕ್ಷದ ತೀರ್ಮಾನ, ಕಾಂಗ್ರೆಸ್ ಸದಸ್ಯರು ಅಧ್ಯಕ್ಷರ ಬದಲಾವಣೆ ಬಯಸಿದ್ದರಿಂದ ಹೈಕಮಾಂಡ್ ಸದಸ್ಯರ ಮನವಿಗೆ ಬೆಲೆ ನೀಡಿದೆ. ಪಕ್ಷದಲ್ಲಿ ಎಲ್ಲರಿಗೂ ಸಮಾನತೆ ತತ್ವದ ಅಡಿಯಲ್ಲೇ ನಡೆಸಿಕೊಳ್ಳಲಾಗುತ್ತದೆ. ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಸೂಕ್ತ ಸ್ಥಾನಮಾನ ಗೌರವಕ್ಕೆ ಧಕ್ಕೆಯಿಲ್ಲ. ಕನ್ಯಾಕುಮಾರಿ ಶ್ರೀನಿವಾಸ್, ಜಿಪಂ ಪ್ರಭಾರ ಅಧ್ಯಕ್ಷೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net