ಕನ್ಯಕಾಪರಮೇಶ್ವರಿ ಭಾವಚಿತ್ರ ಮೆರವಣಿಗೆ

ಸಿರವಾರದಲ್ಲಿ ಆರ್ಯವೈಶ್ಯ ಸಮಾಜದಿಂದ ಶ್ರೀ ಕನ್ಯಕಾ ಪರಮೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಎಂ.ಪರಮೇಶ್ವರ ಶೆಟ್ಟಿ, ಎಂ.ನರಸಿಂಹಯ್ಯಶೆಟ್ಟಿ, ಎಂ.ಶೇಷಯ್ಯ ಶೆಟ್ಟಿ, ಆರ್.ಜಯರಾಮಯ್ಯ ಶೆಟ್ಟಿ ಇತರರಿದ್ದರು.
ಸಿರವಾರದಲ್ಲಿ ಆರ್ಯವೈಶ್ಯ ಸಮಾಜದಿಂದ ಶ್ರೀ ಕನ್ಯಕಾ ಪರಮೇಶ್ವರಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಪ್ರಮುಖರಾದ ಎಂ.ಪರಮೇಶ್ವರ ಶೆಟ್ಟಿ, ಎಂ.ನರಸಿಂಹಯ್ಯಶೆಟ್ಟಿ, ಎಂ.ಶೇಷಯ್ಯ ಶೆಟ್ಟಿ, ಆರ್.ಜಯರಾಮಯ್ಯ ಶೆಟ್ಟಿ ಇತರರಿದ್ದರು.
Published on

ಸಿರವಾರ: ಪಟ್ಟಣದಲ್ಲಿ ಆರ್ಯವೈಶ್ಯ ಸಮಾಜದಿಂದ ವಾಸವಿ ಜಯಂತಿ ಆಚರಿಸಲಾಯಿತು. ಕುಂಭ, ಕಳಸ ಹಾಗೂ ವಿವಿಧ ಜನಪದ ವಾದ್ಯಮೇಳದೊಂದಿಗೆ ಶ್ರೀ ಕನ್ಯಕಾಪರಮೇಶ್ವರಿ ಭಾವಚಿತ್ರ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ನಂತರ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಗೆ ಕುಂಕುಮಾರ್ಚನೆ, ತೊಟ್ಟಿಲು ಸೇವೆ, ಮಹಾಮಂಗಳಾರತಿ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ಆರ್ಯವೈಶ್ಯ ಸಮಾಜದ ತಾಲೂಕು ಅಧ್ಯಕ್ಷ ಎಂ.ಪರಮೇಶ್ವರ ಶೆಟ್ಟಿ, ಗೌರವಾಧ್ಯಕ್ಷ ಎಂ.ನರಸಿಂಹಯ್ಯಶೆಟ್ಟಿ, ಉಪಾಧ್ಯಕ್ಷ ಎಂ.ಶೇಷಯ್ಯ ಶೆಟ್ಟಿ, ಪ್ರಮುಖರಾದ ಆರ್.ಜಯರಾಮಯ್ಯ ಶೆಟ್ಟಿ, ದೇವಣ್ಣ ಶೆಟ್ಟಿ ನವಲಕಲ್, ಎಂ.ಮಾಣಿಕ್ಯ ಶೆಟ್ಟಿ, ಎಂ.ಸೂರ್ಯಪ್ರಕಾಶ್ ಶೆಟ್ಟಿ, ಮುರಾರಿ ಕೃಷ್ಣಮೂರ್ತಿ ಶೆಟ್ಟಿ, ಚನ್ನಕೇಶವ ಶೆಟ್ಟಿ, ಅಮರಯ್ಯ ಶೆಟ್ಟಿ, ಹನುಮಂತಯ್ಯ ಶೆಟ್ಟಿ, ಅಶೋಕ್ ಶೆಟ್ಟಿ, ದತ್ತಾತ್ರೇಯ ಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net