ಕನ್ಯಕಾಪರಮೇಶ್ವರಿ ಮೂರ್ತಿ ಮೆರವಣಿಗೆ ನಾಡಿದ್ದು

28 gvt 02
ಗಂಗಾವತಿ ಹಿರೇಜಂತಕಲ್-ವಿರುಪಾಪುರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮಕ್ಕೆ ಮಾಲಾಧಾರಿಗಳು ಮತ್ತು ಮಹಿಳಾ ಮಂಡಳಿ ಸದಸ್ಯರು ಮಂಗಳವಾರ ಚಾಲನೆ ನೀಡಿದರು. ಹಿರೇಜಂತಕಲ್ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ್ , ಪ್ರಮುಖರಾದ ಗಂಗಾಧರ ನರಸಾಪುರ, ದಮ್ಮೂರ ಕೃಷ್ಣಮೂರ್ತಿ, ರುಕ್ಮಿಣಿ ದರೋಜಿ, ಸರೋಜಾ ದಮ್ಮೂರ, ಮಂಜುಳಾ ಇತರರಿದ್ದರು.
Published on

ಗಂಗಾವತಿ: ನಗರದ ಹಿರೇಜಂತಕಲ್-ವಿರುಪಾಪುರದ ಶ್ರೀ ಕನ್ಯಕಾಪರಮೇಶ್ವರಿ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜದ ಕುಲದೇವತೆ ಶ್ರೀ ಕನ್ಯಕಾಪರಮೇಶ್ವರಿ ಆತ್ಮಾರ್ಪಣೆ ದಿನ ನಿಮಿತ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ ಆರಂಭಗೊಂಡವು.

ಹಿರೇಜಂತಕಲ್ ಆರ್ಯ ವೈಶ್ಯ ಸಮಾಜದ ಅಧ್ಯಕ್ಷ ದರೋಜಿ ನಾಗರಾಜ್ ಮಾತನಾಡಿ, ಜ.31ರಂದು ವಿಶೇಷ ಪೂಜೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂದು ಶ್ರೀ ಕನ್ಯಕಾಪರಮೇಶ್ವರಿ ದೇವಿ ವಿಶ್ವರೂಪ ದರ್ಶನ ನೀಡಿದ ದಿನ. ಈಗಾಗಲೇ ಕಠಿಣ ವ್ರತ ಕೈಗೊಂಡ ಮಾಲಾಧಾರಿಗಳಿಂದ ಯಜ್ಞಮುಡಿ,

ಕನ್ಯಕಾಪರಮೇಶ್ವರಿ ಉತ್ಸವ ಮೂರ್ತಿ ಮೆರವಣಿಗೆ, ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ವಾಸವಿ ಹೋಮ, ಪೂರ್ಣಾಹುತಿ, ಹೂವಿನ ಅಲಂಕಾರ , ವಾಸವಿ ಮಹಿಳಾ ಮಂಡಳಿಯಿಂದ ಕುಂಕುಮಾರ್ಚನೆ, ಮಾಲಾ ವಿಸರ್ಜನೆ ಜರುಗಲಿದೆ. ಅರ್ಚಕ ಗುರುಭೀಮಭಟ್ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದರು.

ದೇವಾಲಯದ ಪ್ರಧಾನ ಅರ್ಚಕ ಪ್ರಭಾಕರ ಭಟ್, ಪ್ರಮುಖರಾದ ಗಂಗಾಧರ ನರಸಾಪುರ, ದಮ್ಮೂರ ಕೃಷ್ಣಮೂರ್ತಿ, ಡಿ.ರಾಜಕುಮಾರ, ನರಸಿಂಹದರೋಜಿ, ರುಕ್ಮಿಣಿ ದರೋಜಿ, ಸರೋಜಾ ದಮ್ಮೂರ, ಮಂಜುಳಾ, ರಾಧಮ್ಮ, ವಜ್ರಬಂಡಿ ರೇಣುಕಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net