ಡಾ.ವೀರೇಂದ್ರ ಹೆಗ್ಗಡೆ, ಕನ್ಯಾಡಿ ಶ್ರೀಗಳ ಭೇಟಿ

hegde beti
Published on

ಈಶ್ವರಮಂಗಲ: ಕೋಟಿ-ಚೆನ್ನಯರ ಜನ್ಮಸ್ಥಳವನ್ನು ಅಭಿವೃದ್ಧಿ ಪಡಿಸುತ್ತಿರುವ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಸಮಿತಿ ಪದಾಧಿಕಾರಿಗಳು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಕನ್ಯಾಡಿ ಪೀಠದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಭೇಟಿಯಾಗಿ ಪಡುಮಲೆಯಲ್ಲಿ ಕಾರ್ಯಗತ ಮಾಡಲು ಉದ್ದೇಶಿಸಿರುವ ಟ್ರಸ್ಟ್‌ನ ಕಾರ್ಯಯೋಜನೆಗಳ ಕುರಿತು ಚರ್ಚಿಸಿದರು.

ಪಡುಮಲೆ ಕೋಟಿ- ಚೆನ್ನಯ ಜನ್ಮಸ್ಥಾನ ಸಂಚಲನ ಟ್ರಸ್ಟ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ನೇತೃತ್ವ ವಹಿಸಿದ್ದರು.ಪಡುಮಲೆ ಕ್ಷೇತ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಹೆಗ್ಗಡೆ ಅವರು ತಿರುಮಲೆ, ಶಬರಿಮಲೆಯಂತೆ ಪಡುಮಲೆಯೂ ಅತ್ಯಂತ ಪವಿತ್ರವಾದ ಕ್ಷೇತ್ರವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಾನ ಸಂಚಲನ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಮಾಜಿ ಶಾಸಕ ರುಕ್ಮಯ ಪೂಜಾರಿ, ಉಪಾಧ್ಯಕ್ಷ ವಿಜಯ್ ಕುಮಾರ್ ಸೊರಕೆ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಪಟ್ಲ, ಪದಾಧಿಕಾರಿಗಳಾದ ಯೋಗೀಶ್ ಕುಮಾರ್ ನಡಕ್ಕರ, ಶೈಲೇಶ್ ಕುಮಾರ್, ಶೇಖರ್ ನಾರಾವಿ, ರತನ್‌ಕುಮಾರ್ ನಾಕ್ ಕರ್ನೂರು ಗುತ್ತು, ಪ್ರಕಾಶ್ ಅಂಚನ್, ಭಗೀರಥ ಜಿ., ಅನಿಲ್ ಕುಮಾರ್ ಉಪ್ಪಿನಂಗಡಿ, ನವೀನ್ ರೈ ಪುತ್ತೂರು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೇದನಾಥ್ ಸುವರ್ಣ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net