ಕನ್ಯಾಡಿಯಲ್ಲಿ ಜೂ. 7ರಿಂದ 13ರ ವರೆಗೆ ಅಖಂಡ ಹರಿನಾಮ ಸಪ್ತಾಹ

 ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ
ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮ ಕ್ಷೇತ್ರ
Published on

ಪ್ರಮುಖ ಮುಖ್ಯಾಂಶಗಳು

  • ಜೂ. 7ರಂದು ಬೆಳಗ್ಗೆ 7 ಗಂಟೆಗೆ ಗ್ರಂಥರಾಜ ಜ್ಞಾನೇಶ್ವರೀ ಬಿಡುಗಡೆ
  • ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮೂಹಿಕ ಪಾರಾಯಣ

ಮಂಗಳೂರು: ಬ್ರಹ್ಮಾನಂದ ಸರಸ್ವತೀಜೀ ಮಹಾರಾಜ ಸ್ವಾಮೀಜಿ ಸಾನಿಧ್ಯದಲ್ಲಿ ಪಂಢರಪುರದ ಚೈತನ್ಯ ಸದ್ಗುರು ಹರಿಪ್ರಸಾದ ಶರದಸ್ವಾಮಿ ಶಿವೂರಕರ ನೇತೃತ್ವ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮೂಹಿಕ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಜೂ. 7ರಿಂದ 13ರ ವರೆಗೆ ನಡೆಯಲಿದೆ ಎಂದು ಪಾರಾಯಣ ಸೇವಾ ಸಮಿತಿಯ ಅಧ್ಯಕ್ಷ ಆರ್.ಟಿ. ಪಾಟೀಲ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜೂ. 7ರಂದು ಬೆಳಗ್ಗೆ 7 ಗಂಟೆಗೆ ಗ್ರಂಥರಾಜ ಜ್ಞಾನೇಶ್ವರೀ ಬಿಡುಗಡೆ ನಡೆಯಲಿದೆ. ಧರ್ಮಸ್ಥಳದ ಕನ್ಯಾಡಿಯ ಶ್ರೀ ರಾಮ ಕ್ಷೇತ್ರದಲ್ಲಿ ಬೆಳಗ್ಗೆ 11ರಿಂದ 1 ಗಂಟೆಯವರೆಗೆ ಸಾಮೂಹಿಕ ಪಾರಾಯಣ, ಸಂಜೆ 4.30ರಿಂದ 6 ಗಂಟೆಯವರೆಗೆ ಪ್ರವಚನ ಮತ್ತು ನಾಮಜಪ, ರಾತ್ರಿ 7ರಿಂದ 9 ಗಂಟೆಯವರೆಗೆ ಕೀರ್ತನೆ, ರಾತ್ರಿ 11ರಿಂದ 1 ಗಂಟೆಯವರೆಗೆ ಜಾಗರಣೆ ನಡೆಯಲಿದೆ. ಪಂಢರಪುರದ 720 ವರ್ಷಗಳ ಹಳೆಯ ವಾರಕರಿ ಸಂಪ್ರದಾಯವನ್ನು ದಕ್ಷಿಣ ಭಾಗಗಳಿಗೆ ಪರಿಚಯಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ ಎಂದವರು ವಿವರಿಸಿದರು.

ಚೈತನ್ಯ ಸದ್ಗುರು ಹರಿಪ್ರಸಾದ್ ಮಹಾರಾಜ, ಆರ್.ಟಿ. ಪಾಟೀಲ್, ನಾರಾಯಣ ಬಿ.ಸಿ., ಕಂಜರಗದ್ದೆ, ವಿನೋದ್ ಕುಮಾರ್, ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net