ವಿವಿಧ ಬೇಡಿಕೆ ಈಡೇರಿಕೆಗೆ ಕಣ್ವ ಕಾರ್ಮಿಕರ ಪ್ರತಿಭಟನೆ

16TMK_Kanva_Protest
Published on

ತುಮಕೂರು: ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾಗಿರುವ ಸಂಬಳ, ರಜೆ ನಗದೀಕರಣ, ಪಿಎಫ್ ಮತ್ತಿತರ ಬಾಕಿ ಕೊಡುವಂತೆ ಒತ್ತಾಯಿಸಿ ಬಜ್ಜನಹಳ್ಳಿ ಕಣ್ವ ಕಾರ್ಮಿಕರ ಹೋರಾಟ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಉಪವಿಭಾಗಾಧಿಕಾರಿ ಅಜಯ್ ಬಳಿ ಮಹಿಳಾ ಕಾರ್ಮಿಕರು ಸಂಕಷ್ಟಗಳನ್ನು ಹೇಳಿಕೊಂಡರು. ಕಾರ್ಮಿಕರ ಅಹವಾಲು ಗಳನ್ನು ಸವಾಧಾನದಿಂದ ಆಲಿಸಿದ ಉಪವಿಭಾಗಾಧಿಕಾರಿ ಮುಂದಿನ 15 ದಿನದ ಒಳಗೆ ವಸ್ತುಸ್ಥಿತಿ ವರದಿ ನೀಡುವಂತೆ ಕಾರ್ಮಿಕ ನಿರೀಕ್ಷಕ ಶ್ರೀಕಾಂತ್‌ಗೆ ಸೂಚಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಕೊರಟಗೆರೆ ತಾಲೂಕಿನ ಬಜ್ಜನಹಳ್ಳಿಯಲ್ಲಿ ಕಣ್ಣ ್ಯಾಷನ್ ಗಾರ್ಮೆಂಟ್ಸ್ ಇದೆ. ಈಗ ಅದನ್ನು ಮುಚ್ಚಿದ್ದು ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ, ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದರು. ಏಕಾಏಕಿ ಆಡಳಿತ ಮಂಡಳಿ ಟಕ ಮುಚ್ಚಿದ್ದು ಕಾರ್ಮಿಕರನ್ನು ಕಾನೂನುಬಾಹಿರವಾಗಿ ಕೆಲಸದಿಂದ ತೆಗೆದಿದ್ದಾರೆ. ಕಾರ್ಮಿಕರಿಗೆ ಕಾನೂನುಬದ್ಧವಾಗಿ ಬರಬೇಕಾಗಿದ್ದ 1.48ಕೋಟಿ ರೂ. ಕೊಡಿಸಿಕೊಡಬೇಕು ಎಂದರು.

ಮುಖಂಡರಾದ ಗೋಪಾಲ್ ಮಾತನಾಡಿ, ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದ ನಮ್ಮ ಕುಟುಂಬಗಳು ತೀವ್ರ ತೊಂದರೆಗೆ ಸಿಲುಕಿವೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆಗೆ ಕಷ್ಟವಾಗುತ್ತಿದೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶ ವಾಡಿ ಬಾಕಿ ಹಣ ಕೊಡಿಸಬೇಕು ಎಂದರು.

ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಹ್ಮಣ್ಯ, ಕಾರ್ಮಿಕರಾದ ಭೀಮೇಗೌಡ, ತಿಮ್ಮಪ್ಪ, ರತ್ನಮ್ಮ, ಶೈಲಾ, ಆನಂದ, ಟೀಮೆಕ್ ಕಾರ್ಮಿಕರ ಸಂದ ಉಪಾಧ್ಯಕ್ಷ ನರಸಿಂಹಮೂರ್ತಿ, ಜಿಲ್ಲಾ ುಟ್‌ಪಾತ್ ವ್ಯಾಪಾರಿಗಳ ಸಂದ ಮುತ್ತುರಾಜ್, ವಸೀಂ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net