

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ರೋಶನಿ ನಿಲಯದ ವತಿಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಕಾನೂನು ಅರಿವು ಕಾರ್ಯಾಗಾರ ನಡೆಯಿತು.
ಕಾರ್ಯಾಗಾರದಲ್ಲಿ ರೋಶನಿ ನಿಲಯದ ಅಪರಾಧ ಮತ್ತು ವಿಧಿವಿಜ್ಞಾನ ಪದವಿ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ನೃತ್ಯ, ರೂಪಕ ಹಾಗೂ ಹಾಡುಗಳ ಮೂಲಕ ವಿಚಾರಣಾಧೀನ ಖೈದಿಗಳಿಗೆ ಕಾನೂನು ಅರಿವು ಕುರಿತು ಜಾಗೃತಿ ಮೂಡಿಸಿದರು. ಜಿಲ್ಲಾ ಕಾರಾಗೃಹದ ಮುಖ್ಯಾಧಿಕಾರಿ ಓಬಳೇಶಪ್ಪ, ಕಾನೂನು ಪ್ರಾಧಿಕಾರದ ವಕೀಲೆ ಸೌಮ್ಯಾ ಹಾಗೂ ರೋಶನಿ ನಿಲಯದ ಶಿಕ್ಷಕ ವೃಂದ ಭಾಗವಹಿಸಿದ್ದರು.