

ತ್ಯಾಗರ್ತಿ: ಸಾಗರ ತಾಲೂಕಿನ ಕಾನುಗೋಡಿನ ಜಿ.ಅಭಿಷೇಕ್ ಬೆಂಗಳೂರು ಇನ್ಸ್‌ಟಿಟ್ಯೂಟ್ ಆ್ ಟೆಕ್ನಾಲಜಿಯ ಮೆಕಾನಿಕಲ್ ಇಂಜಿನಿಯರಿಂಗ್‌ನಲ್ಲಿ 2022-23ನೇ ಸಾಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಮೊದಲ ರ‌್ಯಾಂಕ್‌ನೊಂದಿಗೆ 7 ಬಂಗಾರದ ಪದಕ ಗಳಿಸಿದ್ದಾರೆ. ಮಂಗಳವಾರ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ 23ನೇ ಘಟಿಕೋತ್ಸವದಲ್ಲಿ ಪದಕ ಪ್ರದಾನ ಮಾಡಲಾಯಿತು.
ಇವರು ಕಾನುಗೋಡಿನ ಕೆ.ಜಿ.ಗಣಪತಿ ಹಾಗೂ ಮಲ್ಲಿಕಾ ದಂಪತಿ ಪುತ್ರ. ಗಣಪತಿ ಕುಟುಂಬದ ನಿರ್ವಹಣೆಗಾಗಿ ಸಾಗರದಿಂದ ಚಿಂತಾಮಣಿ ತಾಲೂಕಿನ ತಳಗವಾರ ಗ್ರಾಮಕ್ಕೆ ವಲಸೆ ಹೋಗಿ ಅಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದಾರೆ. ಮಗ ಅಭಿಷೇಕ್ ಇಂಜಿನಿಯರಿಂಗ್ ವ್ಯಾಸಂಗಕ್ಕಾಗಿ ಬೆಂಗಳೂರಿನ ತಾಂತ್ರಿಕ ಕಾಲೇಜಿಗೆ ಪ್ರವೇಶ ಪಡೆದಿದ್ದರು. ಅಲ್ಲಿನ ವಾಸ್ತವ್ಯಕ್ಕೆ ಪಿಜಿ ಹಾಗೂ ಹಾಸ್ಟೆಲ್‌ಗಳು ದುಬಾರಿಯಾಗಿದ್ದರಿಂದ ಕುಟುಂಬಕ್ಕೆ ಆರ್ಥಿಕ ಹೊರೆ ಆಗಬಾರದೆಂದು ಚಿಂತಾಮಣಿ ತಾಲೂಕಿನ ತಳಗವಾರ ಹಳ್ಳಿಯಿಂದ 70 ಕಿ.ಮೀ. ದೂರದ ಬೆಂಗಳೂರಿಗೆ ಪ್ರತಿದಿನ 140 ಕಿಮೀ ಸಾರಿಗೆ ಬಸ್‌ನಲ್ಲಿ ಪ್ರಯಾಣ ಮಾಡಿ ವ್ಯಾಸಂಗ ಮಾಡಿದ್ದಾರೆ.