

ಚಿತ್ರದುರ್ಗ: ಪಕ್ಷದ ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಜವಾಬ್ದಾರಿ ನೀಡಿದ್ದಾರೆ. ಜಿಲ್ಲಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವುದಾಗಿ ಜೆಡಿಎಸ್ ರಾಜ್ಯಉಪಾಧ್ಯಕ್ಷ ಬಿ.ಕಾಂತರಾಜ್ ಹೇಳಿದರು. ಶುಕ್ರವಾರ ಪಕ್ಷದ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ,ವರಿಷ್ಠರಾದ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ಪ್ರಧಾನ ಕಾರ್ಯದರ್ಶಿಯಾಗಿದ್ದ ನನ್ನನ್ನು ಉಪಾಧ್ಯಕ್ಷನನ್ನಾಗಿ ನೇಮಿಸಿದ್ದಾರೆ.
ಕುಮಾರ ಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ ಯೋಜನೆಗಳನ್ನು ಜನತೆಗೆ ತಲುಪಿಸಿ, ಮುಂದಿನ ವಿಧಾನಸಭೆ ಚುನಾವಣೆಯ ಲ್ಲಿ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಸೇರಿ ಕೆಲಸ ಮಾಡೋಣವೆಂದರು.
ನೇಮಕ ಪತ್ರ ವಿತರಿಸಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಡಿ.ಯಶೋಧರ್,ಜಿಲ್ಲೆಗೆ ಸಮರ್ಥ ನಾಯಕತ್ವವನ್ನು ಕಲ್ಪಿಸುವ ಉದ್ದೇಶದಿಂದ ವರಿಷ್ಠರು ಕಾಂತರಾಜ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸ ಬೇಕಿದೆ ಎಂದರು.
ಜಿಲ್ಲಾ ಕಾರ್ಯಾಧ್ಯಕ್ಷ ಜಿ.ಬಿ.ಶೇಖರ್, ಮಠದಹಟ್ಟಿ ವೀರಣ್ಣ,ಡಿ.ಗೋಪಾಲಸ್ವಾಮಿ ನಾಯಕ,ತಿಮ್ಮಣ್ಣ,ಹನುಮಂತರಾಯಪ್ಪ, ಪರಮೇಶ್ವರಪ್ಪ, ಗೀತಮ್ಮ,ನಸ್ರುಲ್ಲಾ,ತಿಪ್ಪೇಸ್ವಾಮಿ,ಚಂದ್ರಶೇಖರ್,ವಿಜಯಕುಮಾರ್,ನಿಜಲಿಂಗಪ್ಪ,ಗುರುಸಿದ್ದಪ್ಪ ಜೆ.ಎನ್.ಕೋಟೆ, ಕಾಟಿಹಳ್ಳಿ ಕರಿಯಪ್ಪ, ಸಂದೀಪ್,ಸೂರಪ್ಪ,ಇ.ಮಂಜುನಾಥ್,ಅಬ್ಬು,ಪ್ರಸನ್ನ ಪೊಲೀಸ್ ಭೇಟೆ ಮತ್ತಿತರರು ಇದ್ದರು.
---