

ಕಾರ್ಕಳ: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಕಾಂತಾವರ ಕಾಂತೇಶ್ವರ ದೇವರ ಹೆಸರಿನಲ್ಲಿ ಯಕ್ಷಗಾನ ಮೇಳವೊಂದು ಮುಂದಿನ ವರ್ಷದ ತಿರುಗಾಟಕ್ಕೆ ಬಯಲಾಟ ಮೇಳವಾಗಿ ಹೊರಡಲಿದೆ. 40 ವರ್ಷ ಹಿಂದೆ ಪುತ್ತೂರು ಶ್ರೀಧರ ಭಂಡಾರಿ ಸಂಚಾಲಕತ್ವದಲ್ಲಿ ಈ ಹೆಸರಿನ ಮೇಳವಿದ್ದು ಸದ್ಯ ಸ್ಥಳೀಯ ಕಲಾವಿದರನ್ನೊಳಗೊಂಡ ಮೇಳ ರೂಪಿಸಲಾಗಿದೆ. ಕಾಲಮಿತಿಯ ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶಿಸಲಾಗುವುದು. ಮಾಹಿತಿಗೆ ಕಲಾವಿದ ಮಹಾವೀರ ಪಾಂಡಿ (9972993299) ಅವರನ್ನು ಸಂಪರ್ಕಿಸಬಹುದು.