ಕಾಂತೇಶಗೆ ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರ

6 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಾಲೂಕಿನ ಅಮ್ಮಿನಬಾವಿ ಗ್ರಾಮದ ವ್ಯಂಗ್ಯ ಚಿತ್ರಕಲಾವಿದ ಕಾಂತೇಶ ಎಂ. ಬಡಿಗೇರ ಅವರಿಗೆ ರಾಷ್ಟ್ರೀಯ ವ್ಯಂಗ್ಯಚಿತ್ರ ವಿಶೇಷ ಪುರಸ್ಕಾರ ಲಭಿಸಿದೆ.

ಛತ್ತೀಸಗಡ ಸರ್ಕಾರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ "ಕಾರ್ಟೂನ್​ ವಾಚ್​' ನಿಯತಕಾಲಿಕೆಯು ಪ್ರವಾಸಿಗರು ಭಯೋತ್ಪಾದಕರಿಗೆ ಹೆದರುವುದಿಲ್ಲ ಎಂಬ ವಿಷಯವಾಗಿ ಆಯೋಜಿಸಿದ್ದ ಅಖಿಲ ಭಾರತ ಮಟ್ಟದ ವ್ಯಂಗ್ಯಚಿತ್ರಗಳ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಕಾಂತೇಶ ಬಡಿಗೇರ ಈ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು ಪ್ರಸಿದ್ಧ ವ್ಯಂಗ್ಯಚಿತ್ರಕಾರ್ತಿ ಮಾಯಾ ಕಾಮಾತ್​ ಹೆಸರಲ್ಲಿ ನೀಡುವ ಅಂತಾರಾಷ್ಟ್ರೀಯ ಅತ್ಯುತ್ತಮ ಯುವ ರಾಜಕೀಯ ವ್ಯಂಗ್ಯಚಿತ್ರಕಾರ ಗೌರವ ಪ್ರಶಸ್ತಿ ಸಹ ಇವರಿಗೆ ಲಭಿಸಿರುವುದನ್ನು ಇಲ್ಲಿ ಸ್ಮರಿಸಬಹುದು.

-

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net