

ಸಿದ್ದಾಪುರ: ತಾಲೂಕಿನ ಕಾನಸೂರು ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಸಿದ್ದಾಪುರದಲ್ಲಿ ನಡೆದ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ವೀರಾಗ್ರಣಿ ಪ್ರಶಸ್ತಿ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಧನ್ಯಾ ಹೆಗಡೆ ಚಕ್ರ ಎಸೆತ ಹಾಗೂ ಹ್ಯಾಮರ್ ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ರಶ್ಮಿ ನಾಯ್ಕ 3000ಮೀ. ಹಾಗೂ 1500ಮೀ. ಓಟದಲ್ಲಿ ದ್ವಿತೀಯ, ಚೈತನ್ಯ ಗೌಡ 3000 ಮೀ. ಹಾಗೂ 1500ಮೀ. ಓಟದಲ್ಲಿ ದ್ವಿತೀಯ, ಫೋನ್ ವಲ್ಟ ತೃತೀಯ, ನಯನ ಪೂಜಾರಿ ಜಾವೆಲಿನ್ ಎಸೆತದಲ್ಲಿ ಪ್ರಥಮ, ಹ್ಯಾಮರ್ ಎಸೆತದಲ್ಲಿ ದ್ವಿತೀಯ, ಹೆಣ್ಣು ಮಕ್ಕಳ ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ.
ಹೆಣ್ಣು ಮಕ್ಕಳ 14ವರ್ಷದೊಳಗಿನ ವಿಭಾಗದಲ್ಲಿ ಅಂಕಿತ ನಾಯ್ಕ 100ಮೀಟರ್ ಓಟದಲ್ಲಿ ದ್ವಿತೀಯ, ಎತ್ತರ ಜಿಗಿತ ಹಾಗೂ 80ಮೀ. ಹರ್ಡಲ್ಸ್‌ನಲ್ಲಿ ಪ್ರಥಮ, ಭವ್ಯ ಭಟ್ಟ 600ಮೀಟರ್ ಓಟದಲ್ಲಿ ಪ್ರಥಮ ಸ್ಥಾನ.
ಗಂಡು ಮಕ್ಕಳ ವಿಭಾಗದಲ್ಲಿ ಕಿರಣ ಮಡಿವಾಳ 1500ಮೀ. ಓಟದಲ್ಲಿ ದ್ವಿತೀಯ, ಸುಜನ್ ಪೂಜಾರಿ 400ಮೀ. ಓಟ ಪ್ರಥಮ, 800ಮೀ. ಓಟದಲ್ಲಿ ತೃತೀಯ, ನಿತಿನ್ ಎಚ್.ನಾಯ್ಕ ಹ್ಯಾಮರ್ ಎಸೆತದಲ್ಲಿ ದ್ವಿತೀಯ, 4*100ಮೀಟರ್ ರಿಲೇ ದ್ವಿತೀಯ, ಬಾಲ್ ಬ್ಯಾಡ್ಮಿಂಟನ್ ಪ್ರಥಮ, ಥ್ರೋ ಬಾಲ್ ದ್ವಿತೀಯ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ ಎಂದು ಪ್ರೌಢಶಾಲೆ ಪ್ರಕಟಣೆ ತಿಳಿಸಿದೆ.