ಕಾನ್ಷಿರಾಮ್ ವಿಚಾರಧಾರೆಗಳಿಂದ ಬದಲಾವಣೆ ಸಾಧ್ಯ

10mnv02
Published on

ಮಾನ್ವಿ: ಪಟ್ಟಣದಲ್ಲಿ ಬಿಎಸ್‌ಪಿಯಿಂದ ಬುಧವಾರ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ಕಾನ್ಷಿರಾಮ್ ಪುಣ್ಯಸ್ಮರಣೆ ಆಚರಿಸಲಾಯಿತು. ತಾಲೂಕು ಸಂಚಾಲಕ ಶ್ಯಾಮಸುಂದರ ಮಾತನಾಡಿ, ಕಾನ್ಷಿರಾಮ್ ದೇಶದಲ್ಲಿನ ಬಹುಜನರ ಉದ್ಧಾರ ಹಾಗೂ ಶೋಷಿತರ ಏಳಿಗೆಗಾಗಿ ಕಾನ್ಷಿರಾಮ್ ಬಹುಜನ ಸಮಾಜ ಪಕ್ಷ ಸ್ಥಾಪಿಸಿದರು. ಕಾನ್ಷಿರಾಮ್ ಅವರ ವಿಚಾರಧಾರೆಗಳಿಂದ ದೇಶದಲ್ಲಿ ಸಮಗ್ರ ಬದಲಾವಣೆ ತರುವುದಕ್ಕೆ ಸಾಧ್ಯ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net