ಕಣ್ಣೂರು ವಾರ್ಡ್ ರಸ್ತೆ ವಿಸ್ತರಣೆಗೆ ಶಾಸಕ ಕಾಮತ್ ಶಿಲಾನ್ಯಾಸ

mng-5sep-kannuru ward
Published on



ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 52ನೇ ಕಣ್ಣೂರು ವಾರ್ಡ್‌ನ ಬಲ್ಲೂರು ಅಡ್ಡರಸ್ತೆಯ ಕಿರಿದಾದ
ರಸ್ತೆಯ ವಿಸ್ತರಣೆ ಹಾಗೂ ಮುಂದುವರಿಕೆ ಕಾಮಗಾರಿಗೆ ಶಾಸಕ ಡಿ. ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭ ಶಾಸಕರು ಮಾತನಾಡಿ ‘ಬಹಳ ಸಮಯದಿಂದ ಇಲ್ಲಿನ ಕಿರಿದಾದ ರಸ್ತೆಯ ಅಗಲೀಕರಣ ಹಾಗೂ ವಿಸ್ತರಣೆಯ
ಬೇಡಿಕೆ ಇತ್ತು. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ಅನುದಾನ ಹೊಂದಿಸಿಕೊಂಡು 15 ಲಕ್ಷ ರೂ. ವೆಚ್ಚದಲ್ಲಿ ಈ
ರಸ್ತೆಯ ವಿಸ್ತರಣೆ ಕಾಮಗಾರಿ ನಡೆಸಲಾಗುತ್ತಿದೆ ಎಂದರು.
ಸ್ಥಳೀಯ ಕಾರ್ಪೋರೇಟರ್ ಚಂದ್ರಾವತಿ ವಿಶ್ವನಾಥ್, ಬಿಜೆಪಿ ಪ್ರಮುಖರಾದ ವಿವೇಕ್ ಸುವರ್ಣ , ನವೀನ್ ಕುಲಾಲ್, ಯಶವಂತ ಅಮೀನ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net