

ಮಡಿಕೇರಿ:
ಹಸಿರು ದಳ ಮತ್ತು ಜಿಎಐಎ ಏಷ್ಯಾ ಪೆಸಿಫಿಕ್ ಸಹಯೋಗದಲ್ಲಿ ಇತ್ತೀಚೆಗೆ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಆರ್ಗ್ಯಾನಿಕ್ ವೇಸ್ಟ್ ಮತ್ತು ಕ್ಲೆöÊಮೇಟ್ ಚೇಂಜ್ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮ ಪಂಚಾಯಿತಿ ಪಿಡಿಒ ಪುಟ್ಟರಾಜು ಭಾಗವಹಿಸಿದ್ದರು.
ಈ ಸಂದರ್ಭ ಅವರು ಲ್ಯಾಂಡ್‌ಫುಲ್ ಕ್ಲೋಸರ್ ಇನ್ ಪೊನ್ನಂಪೇಟ್ ಆಂಡ್ ಚಾಲೆಂಜಸ್ ಇನ್ ಇಂಪ್ಲಿಮೆAಟೇಷನ್ ಎಂಬ ವಿಚಾರದ ಬಗ್ಗೆ ವಿಷಯ ಮಂಡನೆ ಮಾಡಿದರು. ಈ ಸಮ್ಮೇಳನದಲ್ಲಿ 16 ದೇಶಗಳಿಂದ 200 ಪ್ರತಿನಿಧಿಗಳು ಹಾಜರಾಗಿದ್ದರು. ಭಾರತ ದಿಂದ ಪಿಡಿಒ ಪುಟ್ಟರಾಜು ಅವರು ಪ್ರತಿನಿಧಿಯಾಗಿ ಭಾಗವಹಿಸಿದ್ದರು. ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಉಮಾಮಹದೇವನ್ ಈ ಸಂದರ್ಭ ಹಾಜರಿದ್ದರು.