

ಮುದಗಲ್: ಕನ್ನಾಪುರಹಟ್ಟಿ ಗ್ರಾಮದ ಹೊರವಲಯದಲ್ಲಿ ಶುಕ್ರವಾರ ಬೆಂಕಿ ತಗುಲಿ ಎರಡು ಶೇಂಗಾ ಹೊಟ್ಟಿನ ಬಣವೆ ಮತ್ತು ಒಂದು ಜೋಳದ ಮೇವಿನ ಬಣವೆ ಆಹುತಿಯಾಗಿವೆ. ಕನ್ನಾಪುರಹಟ್ಟಿ ಗ್ರಾಮದ ನಿವಾಸಿ ನಂದವ್ವ ಹನುಮಪ್ಪ ಎಂಬುವರ ಬಣವೆಗಳು ಸುಟ್ಟಿವೆ.
ಸ್ಥಳಕ್ಕೆ ಮುದಗಲ್ ನಾಡತಹಸೀಲ್ದಾರ್ ತುಳಜಾರಾಮ್ ಸಿಂಗ್ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತು. ಬೆಂಕಿ ಅವಘಡ ವರದಿಯನ್ನು ಕಂದಾಯ ಇಲಾಖೆಗೆ ಸಲ್ಲಿಸಿ ಸೂಕ್ತ ಪರಿಹಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ತುಳಜಾರಾಮ್ ಸಿಂಗ್ ತಿಳಿಸಿದರು.