ಸ್ವರ್ಣವಲ್ಲೀ ಮಠಕ್ಕೆ ಕಣ್ಣನ್ ಭೇಟಿ

1sirsi2
Published on

ಶಿರಸಿ: ವಾಗ್ಮಿ, ಚಿಂತಕ, ಕನ್ನಡದ ಪೂಜಾರಿ ಖ್ಯಾತಿಯ ಹಿರೇಮಗಳೂರು ಕಣ್ಣನ್ ಅವರು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನಕ್ಕೆ ಭಾನುವಾರ ಭೇಟಿ ನೀಡಿದರು.

ಸಂಸ್ಥಾನದ ದೇವರ ಹಾಗೂ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳ, ಕಿರಿಯ ಶ್ರೀ ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿಗಳ ದರ್ಶನ, ಉಭಯ ಶ್ರೀಗಳ ಆಶೀರ್ವಾದ ಫಲಮಂತ್ರಾಕ್ಷತೆಯನ್ನು ಸ್ವೀಕರಿಸಿದರು.

ಕಣ್ಣನ್ ಅವರು ಸ್ವರ್ಣವಲ್ಲೀ ಮಠದ ಇತಿಹಾಸ, ಭಗವದ್ಗೀತಾ ಅಭಿಯಾನದ ಮೂಲಕ ಸಮಾಜದ ಸ್ವಾಸ್ಥ್ಯ ಕಾಪಾಡುವ ಶ್ರೀಗಳ ಕಾರ್ಯವನ್ನು ಶ್ಲಾಘಿಸಿದರು. ಹಸಿರು ಸಂರಕ್ಷಣೆಯ ದೀಕ್ಷೆಗಳನ್ನು ಪ್ರಸ್ತಾಪಿಸಿದರು. ಅನೇಕ ಸಂಸ್ಕೃತ ಹಾಗೂ ಕನ್ನಡದ ಮಂತ್ರದ ಸಾಲುಗಳನ್ನು, ನುಡಿಕಟ್ಟುಗಳನ್ನು ಶ್ರೀಗಳಿಗೆ ಸಮರ್ಪಿಸಿದರು.

ಸಂಸ್ಕೃತಿ ಚಿಂತಕಿ ನಾಗಶ್ರೀ ತ್ಯಾಗರಾಜ, ದೀಪಕ ದೊಡ್ಡೂರು, ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net