ತಾಯಕನಹಳ್ಳಿ ಮಗಳು ಆಂಧ್ರ ಸಚಿವೆ

110422 Usha Charan Andra Govt Minister
ಉಷಾ ಚರಣ್
Published on

ಕಾನಹೊಸಹಳ್ಳಿ: ಸಮೀಪದ ಗಡಿಗ್ರಾಮ ತಾಯಕನಹಳ್ಳಿ ಮೂಲದ ಉಷಾ ಚರಣ್ ಆಂಧ್ರ ಪ್ರದೇಶದ ಜಗಮೋಹನ್ ರೆಡ್ಡಿ ಸರ್ಕಾರದಲ್ಲಿ ಸೋಮವಾರ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರಿಂದ ಗ್ರಾಮದಲ್ಲಿ ಸಂತಸ ಮನೆ ಮಾಡಿದೆ.

ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದ ಶಾಸಕಿಯಾದ ಉಷಾ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿ ಗ್ರಾಮದ ಕೆ.ವಿರೂಪಾಕ್ಷಪ್ಪ ಅವರ ಪುತ್ರಿಯಾಗಿದ್ದು, ಇವರ ತಾಯಿ ಮೂಲತಹ ಆಂಧ್ರ ಪ್ರದೇಶದವರು. ಚರಣ್ ಅವರನ್ನು ಮದುವೆ ಮಾಡಿಕೊಂಡಿರುವ ಉಷಾ ಪತಿ ಜತೆ ಸೇರಿ ಕಲ್ಯಾಣದುರ್ಗದಲ್ಲಿ ಜನಸೇವೆ ಮಾಡುತ್ತ ಜನಾನುರಾಗಿಯಾಗಿದ್ದು, ಶಾಸಕಿಯಾಗಿ ಆಯ್ಕೆಯಾಗಿದ್ದರು. ಈಗ ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ತಾಯಕನಹಳ್ಳಿಯ ಕುರುಬ ಸಮುದಾಯದ ಮುಖಂಡ ಮಂಜುನಾಥ, ತವರು ಮನೆಯನ್ನು ಉಷಾ ಚರಣ್ ಮರೆತಿಲ್ಲ. ಕಳೆದ ತಿಂಗಳು ಅವರು ಊರಿಗೆ ಬಂದು ಹೋಗಿದ್ದಾರೆ. ನಮ್ಮೂರ ಮಗಳು ಆಂಧ್ರ ಸರ್ಕಾರದಲ್ಲಿ ಸಚಿವೆಯಾಗಿರುವುದಕ್ಕೆ ಎಲ್ಲರಿಗೂ ಸಂತಸವಾಗಿದೆ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net