ರಾಜಧಾನಿಯಲ್ಲೇ ಅಲ್ಪಸಂಖ್ಯಾತರಾಗುತ್ತಿರುವ ಕನ್ನಡಿಗರು: ಪ್ರದೀಪ್ ಕುಮಾರ್ ಕಳವಳ

PRADEEP KUMAR
Published on

ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಕಳವಳ

ಅಪ್ಪು ನಮನ ಮತ್ತು ಕರುನಾಡ ಹಬ್ಬ ಕಾರ್ಯಕ್ರಮ

ಮೈಸೂರು: ರಾಜಧಾನಿ ಬೆಂಗಳೂರಿನಲ್ಲಿ ಕನ್ನಡ ಸೊರಗುತ್ತಿದ್ದು, ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಪ್ರದೀಪ್ ಕುಮಾರ್ ಕಳವಳ ವ್ಯಕ್ತಪಡಿಸಿದರು.
67ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ನಗರದ ಎಂಜಿ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಶ್ರೀ ದುರ್ಗಾ ಫೌಂಡೇಷನ್ ಇತ್ತೀಚೆಗೆ ಆಯೋಜಿಸಿದ್ದ ಅಪ್ಪು ನಮನ ಮತ್ತು ಕರುನಾಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕನ್ನಡ ನಾಡು, ನುಡಿಕಟ್ಟುವ ಜವಾಬ್ದಾರಿ ನಮ್ಮೆಲ್ಲರದ್ದು. ನಾಡು, ನುಡಿ, ನೆಲ, ಜಲಕ್ಕೆ ಅಪಮಾನವಾದರೆ ಸಹಿಸುವುದಿಲ್ಲ. ಇದರ ಬಗ್ಗೆ ನಾವೆಲ್ಲರೂ ತಕ್ಷಣ ಎಚ್ಚೆತ್ತುಕೊಂಡು ನಾಡನ್ನು ಸಮೃದ್ಧಿಗೊಳಿಸುವ ನಿಟ್ಟಿನಲ್ಲಿ ಪಣ ತೊಡಬೇಕು ಎಂದು ಸಲಹೆ ನೀಡಿದರು.


ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆ ಡಾ.ಆರ್.ಎಚ್. ಪವಿತ್ರಾ ಮಾತನಾಡಿ, ರಾಜ್ಯದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವವರಿದ್ದು, ಬೇರೆ ರಾಜ್ಯಗಳಿಂದ ವಲಸೆ ಬಂದವರಿಂದ ಕನ್ನಡ ಭಾಷೆಯನ್ನು ಬಳಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಮಲ್ಲಯ್ಯ ಶಿವಮೂರ್ತಿಯ್ಯ ಕೋಮಾರಿ, ಪ್ರಶಾಂತ ಮಲಗಾವಿ, ಮಹಾಂತೇಶ್ ಪೂಜಾರಿ, ಗೋಕುಲ್ ಸಾಬ್ ಬಾವಾಜಿ, ಡಾ. ಗೌತಮಿ ಗೌಡ, ಶರಣಮ್ಮ ಮಾಲಿ ಪಾಟೀಲ್, ಎಸ್.ಎನ್. ಮಂಜುಳಾ ಸೋಮಶೇಖರ್, ದಿನೇಶ್, ಅಜಯ್ ನಾಯಕ್, ಉಷಾರಾಣಿ, ಇಂದ್ರಮ್ಮ, ಎಂ.ಟಿ. ಯೋಗೀಶ್‌ಕುಮಾರ್, ನಂದ ಕುಮಾರ್, ರೋಶನ್, ಎಂ.ಆರ್. ರೇವಣ್ಣ ಸಿದ್ದೇಗೌಡ, ಬಿಂದುಗೌಡ, ಜನೇಲಾಜಸ್ವಿ, ಡಾ. ಹಲೀಮಾ, ಸೀಮಾ ಕಿರಣ್, ಭೂಮಿಕಾ, ರೂಪಾ ಎಚ್. ಗೌಡ , ನಯನಾ, ಮೇಘನಾ ರಾವ್, ಉಮಾದೇವಿ. ಎಲ್. ಎಸ್. ನಾಗರತ್ನ ತಡಕನಹಳ್ಳಿ, ತೀರ್ಥ ಹೊನ್ನಮ್ಮ , ರವಿ ನಂದನ, ಡಾ. ಸುಧಾಕರ ಜಿ. ಲಕ್ಕವಳ್ಳಿ , ಕುಶಾಲ ಹರದೇ ಗೌಡ ಅವರಿಗೆ ‘ಹೆಮ್ಮೆಯ ಕನ್ನಡಿಗ ಮತ್ತು ಕನ್ನಡತಿ ಪ್ರಶಸ್ತಿ’ ಪ್ರದಾನ ಮಾಡಲಾಯಿತು.


ಶ್ರೀ ದುರ್ಗಾ ಫೌಂಡೇಷನ್ ಟ್ರಸ್ಟ್ ಅಧ್ಯಕ್ಷೆ ರೇಖಾ ಶ್ರೀನಿವಾಸ್, ಕಲ್ಪವೃಕ್ಷ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಬಸವರಾಜ ಪೂಜಾರಿ, ರೂಪದರ್ಶಿ ಶಿಲ್ಪಾ ಸುಧಾಕರ್, ಮುಖಂಡರಾದ ದಿವ್ಯಾ, ಸಂತೋಷ್ ಕಿರಾಲು, ವಿದ್ಯಾ, ನಾಗಶ್ರೀ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net