

ಕಲಬುರಗಿ: ರಾಜ್ಯೋತ್ಸವ ನಿಮಿತ್ತ ಕರ್ನಾಟಕ ಸಂಘಟನಾ ವೇದಿಕೆಯಿಂದ ನ.೧೬ರಂದು ರಥದ ಮೇಲೆ ಕನ್ನಡಾಂಬೆ ಮೆರವಣಿಗೆ ಹಾಗೂ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಗುರುರಾಜ ಬಂಡಿ ಮಾಹಿತಿ ನೀಡಿದರು.
ಬೆಳಗ್ಗೆ ೧೦ಕ್ಕೆ ಜಗತ್ ವೃತ್ತದಿಂದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದ ಮೂಲಕ ವಿಶ್ವೇಶ್ವರಯ್ಯ ಭವನದವರೆಗೆ ಕನ್ನಡಾಂಬೆಯ ಮೆರವಣಿಗೆ ನಡೆಯಲಿದೆ. ಚಿತ್ರನಟ ಪ್ರಜ್ವಲ್ ದೇವರಾಜ್ ಪಾಲ್ಗೊಳ್ಳಲಿದ್ದಾರೆ. ಡೊಳ್ಳು ಕುಣಿತ, ಬಂಜಾರಾ ನೃತ್ಯ, ಹಲಗೆ ಸೇರಿ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೆರವಣಿಗೆ ನಂತರ ವಿಶ್ವೇಶ್ವರಯ್ಯ ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ, ಐವರು ಅಂಧ ಅನಾಥ ಮಕ್ಕಳಿಗೆ ದತ್ತು ಸ್ವೀಕಾರ ಹಾಗೂ ಗಣ್ಯರಿಗೆ ಸನ್ಮಾನ ನಡೆಯಲಿದೆ. ಶ್ರೀ ಮಲ್ಲಿಕಾರ್ಜುನ ಮುತ್ಯಾ ಸಾನ್ನಿಧ್ಯ ವಹಿಸಲಿz್ದÁರೆ. ಶಾಸಕ ಬಸವರಾಜ ಮತ್ತಿಮೂಡ, ಶರಣು ಮೋದಿ, ಡಾ.ಸುರೇಶ ಶರ್ಮಾ, ಶಾಸಕ ಅಲ್ಲಮಪ್ರಭು ಪಾಟೀಲ್ ಸೇರಿ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಂಘಟನೆ ಜಿಲ್ಲಾಧ್ಯಕ್ಷ ಈಶ್ವರ ಜಿ.ಎಚ್., ಸಾಗರ ಭಾವಿ, ಸಚಿವ ಪೂಜಾರಿ, ಅನೀಲ ಬಂಡಿ, ಅಣ್ಣಾರಾವ ಮತ್ತಿಮೂಡ್, ಉಮೇಶ ಬಿರಾದಾರ, ಸಚೀನ್ ಕೋರವಾರ ಇತರರಿದ್ದರು.