ಕನ್ನಡದ್ರೋಹಿ ಸಿಬ್ಬಂದಿ ಬೇರೆಡೆಗೆ ವರ್ಗಾಯಿಸಿ

16 Jaggu 3
ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುವ ಕನ್ನಡದ್ರೋಹಿ ಸಿಬ್ಬಂದಿಯನ್ನು ಬೇರೆ ಪಾಲಿಕೆಗೆ ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಬುಧವಾರ ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು. ಮಹಾದೇವ ತಳವಾರ, ದೇವೇಂದ್ರ ತಳವಾರ, ಸಂತೋಷ ಕಳ್ಳಿಮನಿ, ವಾಸು ಬಸನಾಯ್ಕರ ಇತರರಿದ್ದರು.
Published on

ಬೆಳಗಾವಿ: ಮಹಾನಗರ ಪಾಲಿಕೆ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ 2022 ಜಾರಿಗೊಳಿಸುತ್ತಿದ್ದು, ಇಲ್ಲಿನ ಕೆಲ ಸಿಬ್ಬಂದಿ ಎಂಇಎಸ್ ಪುಂಡರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತಿದ್ದಾರೆ. ಅಂಥವರನ್ನು ಕಂಡುಹಿಡಿದು ಬೇರೆ ಪಾಲಿಕೆಗೆ ವರ್ಗಾವಣೆಗೊಳಿಸಬೇಕು ಎಂದು ಒತ್ತಾಯಿಸಿ ಬುಧವಾರ ಕಿತ್ತೂರು ಕರ್ನಾಟಕ ಸೇನೆಯ ಕಾರ್ಯಕರ್ತರು ಜಿಲ್ಲಾಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿಯಲ್ಲಿ ಶೇ.60 ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಮಹಾನಗರ ಪಾಲಿಕೆ ಆಯುಕ್ತರು, ಮೇಯರ್ ಹಾಗೂ ಉಪ ಮೇಯರ್ ವಾಹನಗಳಿಗೆ ಕನ್ನಡ ನಾಮಲಕ ಅಳವಡಿಸಲಾಗಿದೆ. ಬೆಳಗಾವಿ ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕನ್ನಡದಲ್ಲಿ ನಾಮಲಕ ಹಾಗೂ ಅಂಕಿ-ಸಂಖ್ಯೆ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಿತ್ತೂರು ಕರ್ನಾಟಕ ಸೇನೆಯ ಅಧ್ಯಕ್ಷ ಮಹಾದೇವ ತಳವಾರ ಮಾತನಾಡಿ, ಕನ್ನಡ ಅಭಿವೃದ್ಧಿ ಪ್ರಾಕಾರದವರು ಈಚೆಗೆ ಬೆಳಗಾವಿಗೆ ಬಂದು ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯಲ್ಲಿ ಸಭೆ ನಡೆಸಿ ಬೆಳಗಾವಿಯಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಸೂಚಿಸಿದ್ದರು. ಅದನ್ನು ವಿರೋಸಿ ಕೆಲವು ಎಂಇಎಸ್‌ನವರು ಕನ್ನಡ ಕಡ್ಡಾಯ ಬಳಕೆ ರದ್ದು ಮಾಡಿ ಎಂದು ಮನವಿ ಮಾಡಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ಬದಲಾಗಿ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಮನವಿ ಮಾಡಿದ್ದೇವೆ ಎಂದರು.

ದೇವೇಂದ್ರ ತಳವಾರ, ಸಂತೋಷ ಕಳ್ಳಿಮನಿ, ವಾಸು ಬಸನಾಯ್ಕರ, ಶಶಿಕಾಂತ ಅಷ್ಟೇಕರ, ಭರಮಪ್ಪ ಕಾಂಬಳೆ, ಸಿದ್ರಾಯಿ ನಾಯಿಕ, ಮಾರುತಿ ದೊಡ್ಡಲಕ್ಕಾಪ್ಪಗೋಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net