ಕನ್ನಡ ಗೀತ ಗಾಯನ ನಾಳೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕನ್ನಡ ರಾಜ್ಯೋತ್ಸವ ಹಾಗೂ ಈಶ್ವರ ಸಣಕಲ್ಲ ದತ್ತಿ ನಿಮಿತ್ತ ತಾಲೂಕು ಕನ್ನಡ ಸಾಹಿತ್ಯ ಪರಿಷತ್​, ಕೆಪಿಇಎಸ್​ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ನ. 22ರಂದು ಬೆಳಗ್ಗೆ 10 ಗಂಟೆಗೆ ಕಾಲೇಜಿನ ಸಭಾಭವನದಲ್ಲಿ ಉಪನ್ಯಾಸ ಹಾಗೂ ಕನ್ನಡ ಗೀತ ಗಾಯನ ಏರ್ಪಡಿಸಲಾಗಿದೆ.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಕಾರ್ಯಕ್ರಮ ಉದ್ಘಾಟಿಸುವರು. ಕನ್ನಡ ನಾಡು-ನುಡಿ ಪರಂಪರೆ ಕುರಿತು ಡಾ. ಜಿನದತ್ತ ಹಡಗಲಿ ಉಪನ್ಯಾಸ ನೀಡುವರು. ಕೆಪಿಇಎಸ್​ ಕಾಲೇಜಿನ ಪ್ರಾಚಾರ್ಯ ಎ.ಎಂ. ಶಲವಡಿ ಅಧ್ಯಕ್ಷತೆ ವಹಿಸುವರು. ತಾಲೂಕು ಘಟಕದ ಅಧ್ಯಕ್ಷ ಮಹಾಂತೇಶ ನರೇಗಲ್ಲ, ದತ್ತಿದಾನಿ ಮಧುಮತಿ ಸಣಕಲ್ಲ ಉಪಸ್ಥಿತರಿರುವರು ಎಂದು ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಮತ್ತು ಉಮಾ ಬಾಗಲಕೋಟ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net