ಕನ್ನಡ ಗೀತೆಗಳ ಸ್ಪರ್ಧೆ ಆಯೋಜನೆ

IMG_20251031_210437.jpg
Published on

ಧಾರವಾಡ: ಧಾರವಾಡ ವಿದ್ಯಾಗಿರಿಯ ಕರೋಕೆ ತರಬೇತಿ ಕೇಂದ್ರದ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಕನ್ನಡ ಗೀತೆಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಕರೋಕೆ ಗೀತೆಗಳ ಆಡಿಷನ್ ನ.8 ಮತ್ತು 9ರಂದು ಎನ್‌ಟಿಟಿಎಫ್ ಎದುರಿನ ಶ್ರೀ ಸಾಯಿ ಪಿಯು ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಕೇಂದ್ರದ ಮುಖ್ಯಸ್ಥ ಮೈನುದ್ದಿನ್ ಕಿರವಾಡಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಡಿಷನ್‌ನಲ್ಲಿ ಮೂರು ಸುತ್ತುಗಳ ಸ್ಪರ್ಧೆ ನಡೆಸಿ ಪ್ರತಿಭಾವಂತ ಹಾಡುಗಾರರನ್ನು ಆಯ್ಕೆ ಮಾಡಲಾಗುವುದು. ಅಂತಿಮ ಸುತ್ತಿನ ಸ್ಪರ್ಧೆಯನ್ನು ನವೆಂಬರ್ ತಿಂಗಳ ಕೊನೆಯ ವಾರದಲ್ಲಿ ನಡೆಸಲಾಗುವುದು. ವಿಜೇತರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು. ಪ್ರಥಮ ಸ್ಥಾನ ಪಡೆದ ಸ್ಪರ್ಧಗೆ `ಕನ್ನಡ ಗಾನ ಕೌಸ್ತುಭ-2025' (7ನೇ ಆವೃತ್ತಿ) ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

10 ವರ್ಷದಿಂದ ನಮ್ಮ ಕರೋಕೆ ತರಬೇತಿ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 7 ವರ್ಷದಿಂದ ಈ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು, ಉದಯೋನ್ಮುಖ ಕಲಾವಿದರು ಹೊರ ಹೊಮ್ಮಿದ್ದಾರೆ. ಸುಮಾರು 150 ಸ್ವಯಂ ಸೇವಕರು ಕೇಂದ್ರದಲ್ಲಿದ್ದಾರೆ. ನಮ್ಮ ಕರೋಕೆ ತರಬೇತಿ ಕೇಂದ್ರದಲ್ಲಿ ಒಂದು ತಿಂಗಳ ಕಾಲ ತರಬೇತಿ ನೀಡುತ್ತಿದ್ದೇವೆ. ಇಲ್ಲಿ ತರಬೇತಿ ಪಡೆದವರು ರಾಜ್ಯಮಟ್ಟದಲ್ಲಿ ಹೆಸರು ಮಾಡಿದ್ದಾರೆ. `ಜಿ ಕನ್ನಡ ಸರಿಗಮ ಪದನಿಸ' ಕಾರ್ಯಕ್ರಮಕ್ಕೂ ಹೋಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net