

ಬೆಳಗಾವಿ: ಕರ್ನಾಟಕ ಏಕೀಕರಣ ಹೋರಾಟದಿಂದ ಹಿಡಿದು ಇಲ್ಲಿಯವರೆಗೆ ನಾಲ್ಕೈದು ತಲೆಮಾರುಗಳು ಕನ್ನಡ ಹೋರಾಟಕ್ಕೆ ಕೈಜೋಡಿಸಿವೆ. ಇಂದಿನ ಪೀಳಿಗೆ ಕನ್ನಡ ನಾಡಿನ ಇತಿಹಾಸ ತಿಳಿದುಕೊಂಡು ಯಾರೊಂದಿಗೂ ದ್ವೇಷ ಸಾಧಿಸದೆ, ಯಾರದೋ ಕೈಗೊಂಬೆಯಾಗದೆ ಸಮಾಜ ಮುಖಿಯಾಗಿ ಕಟ್ಟಕಡೆಯ ಕನ್ನಡಿಗನಿಗೂ ನ್ಯಾಯ ಸಿಗುವಂತೆ ಹೊರಾಟ ರೂಪಿಸಬೇಕು ಎಂದು ಕನ್ನಡ ಹೋರಾಟಗಾರ ಅಶೋಕ ಚಂದರಗಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಜರುಗಿದ ಗಡಿನಾಡು ಕನ್ನಡಿಗರ ಸೇನೆಯ ರಾಜ್ಯ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೆನೆಟ್ಟಿ ಮಾತನಾಡಿ, ಬೆಳಗಾವಿ ಸುವರ್ಣ ಸೌಧದಲ್ಲಿ ಗಡಿ ಸಂರಕ್ಷಣಾ ಆಯೋಗ ಮತ್ತು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಪ್ರಾದೇಶಿಕ ಕಚೇರಿ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಶೀಘ್ರವೇ ಹೋರಾಟ ಆರಂಭಿಸಲಾಗುವುದು ಎಂದರು.
ಪ್ರಣವಂ ಫೌಂಡೇಶನ್ ಗುರುಕುಲದ ಶ್ರೀ ನಿಶ್ಚಲ ಸ್ವರೂಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆನಂದ ಬಡಿಗೇರ, ರಾಮಣ್ಣ ಗುಳ್ಳಿ, ವಂದನಾ ಹೊರಕೇರಿ, ಮಹಾದೇವಿ ಅಗಸಿಬಾಗಿಲು, ಶೈಲಾ ರಾಯ್ಕರ, ಬಸವರಾಜ ಕೋರಿಕೊಪ್ಪ, ಎಸ್.ಎಸ್.ಮೂಕನವರ, ಬಾಬು ಪಠಾಣ, ಆನಂದ ಬಿಲಾವರ, ಪ್ರಭು ಗಸ್ತಿ, ಸಂತೋಷ ಮಾಸೆನಟ್ಟಿ, ಪ್ರಕಾಶ ಚಿಪ್ಪಲಕಟ್ಟಿ, ನಾಗಪ್ಪ ನಾಯಕ, ಆನಂದ ತಳವಾರ, ಶಂಕರ ಕಾಂಬಳೆ, ದತ್ತಾ ಬಿಲಾವರ, ಶಂಕರ ಬಾಗೇವಾಡಿ ಇತರರಿದ್ದರು.