ಸೇವಾ ಮನೋಭಾವದಿಂದ ಕನ್ನಡ ಶಾಲೆಗಳ ಅಭಿವೃದ್ಧಿ ಸಾಧ್ಯ

FotoJet (1)
ನೆಲಮಂಗಲ ತಾಲೂಕಿನ ಯಲಚಗೆರೆ ಸರ್ಕಾರಿ ಶಾಲೆಯ ನೂತನ ಕೊಠಡಿ ಉದ್ಘಾಟನಾ ಸಮಾರಂಭದಲ್ಲಿ ದಾನಿ, ಗ್ರಾಪಂ ಸದಸ್ಯ ಹನುಮಂತರಾಜು ಅವರನ್ನು ಶಾಸಕ ಎನ್​.ಶ್ರೀನಿವಾಸ್​ ಸನ್ಮಾನಿಸಿದರು. ನೆ.ಯೋ. ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ಬ್ಲಾಕ್​ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ, ಬಿಇಒ ರಮೇಶ್​ ಇತರರು ಇದ್ದರು.
Published on

ನೆಲಮಂಗಲ : ಪ್ರತಿಯೊಬ್ಬರು ಸೇವಾ ಮನೋಭಾವವನ್ನು ಮೈಗೂಡಿ ಸಿಕೊಂಡಲ್ಲಿ ಸಮಾಜ ಮತ್ತಷ್ಟು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ತಾಲೂಕಿನ ಶ್ರೀನಿವಾಸಪುರ ಗ್ರಾಮಪಂಚಾಯಿತಿ ವ್ಯಾಪ್ತಿಯ ಯಲಚಗೆರೆ ಸರ್ಕಾರಿ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಜು ಅವರು ನಿರ್ಮಿಸಿರುವ ನೂತನ ಶಾಲಾ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಶಿಕ್ಷಣದ ಜತೆಗೆ ಸಂಸ್ಕಾರವನ್ನು ನೀಡುವ ಮಹತ್ವದ ಕಾರ್ಯವನ್ನು ಸರ್ಕಾರಿ ಶಾಲಾ ಶಿಕ್ಷಕರು ಮಾಡುತ್ತಿದ್ದಾರೆ. ಸರ್ಕಾರಿ ಶಾಲೆಯಲ್ಲಿ ದೊರೆಯುವ ಶಿಕ್ಷಣ ಯಾವುದೇ ಆಂಗ್ಲ ಮಾಧ್ಯಮದಲ್ಲೂ ಸಿಗುವುದಿಲ್ಲ. ಗ್ರಾಮೀಣ ಶಾಲೆಗಳಿಗೆ ವ್ಯವಸ್ಥಿತ ಕಟ್ಟಡಗಳಿದ್ದರೆ ಮಕ್ಕಳು ಶಾಲೆಗೆ ಬರುತ್ತಾರೆ. ತಾಲೂಕಿನಲ್ಲಿ ಬಹುತೇಕ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳನ್ನು ಮೀರಿಸುವಂತಹ ಸುಸಜ್ಜಿತ ಕಟ್ಟಡಗಳನ್ನು ಹೊಂದಿವೆ. ತಂದೆ&ತಾಯಿ ಸ್ಮರಣಾರ್ಥ ಸರ್ಕಾರಿ ಶಾಲೆಯಲ್ಲಿ ಸುಸಜ್ಜಿತ ಕಟ್ಟಡವನ್ನು ನಿರ್ಮಿಸುವ ಮೂಲಕ ಸಮಾಜಕ್ಕೆ ಮಾದರಿ ಸಂದೇಶ ನೀಡಿರುವ ಗ್ರಾಮ ಪಂಚಾಯಿತಿ ಸದಸ್ಯ ಹನುಮಂತರಾಜು ಅವರ ಕಾರ್ಯ ಶ್ಲಾನೀಯ ಎಂದರು. ಗ್ರಾಪಂ ಸದಸ್ಯ ಹನುಮಂತರಾಜು ಮಾತನಾಡಿ, ನಾನು ಶಿಕ್ಷಣ ಪಡೆದ ಶಾಲೆಯಲ್ಲಿ ನನ್ನ ತಂದೆ&ತಾಯಿ ಹೆಸರಿನಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು, ದುಡಿಮೆಯ ಸ್ವಲ್ಪ ಪ್ರಮಾಣವನ್ನುಸಮಾಜ ಸೇವೆಗೆ ಮೀಸಲಿಟ್ಟು, ಸರ್ಕಾರಿ ಶಾಲೆಯ

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದರು.

ಸಿಟಿಪಿಒ ನಾಗೇಶ್​, ಗ್ರಾಪಂ ಉಪಾಧ್ಯೆ ಮಂಗಳಮ್ಮ, ಸದಸ್ಯರಾದ ಗೋವಿಂದರಾಜು, ಚಿಕ್ಕಣ್ಣ, ಸುನೀಲ್​, ಮಂಜುನಾಥಯ್ಯ, ವರಲಕ್ಷ$್ಮಮ್ಮ, ಉದ್ಯಮಿ ಎಂಬಿಟಿ ರಾಮಕೃಷ್ಣಪ್ಪ, ನಿವೃತ್ತ ಮುಖ್ಯಶಿಕ್ಷಕ ಬಸಣ್ಣ, ಮುಖಂಡ ಎಂ.ಕೆ.ನಾಗರಾಜು, ಸಿ.ಎಂ.ಗೌಡ, ಹರೀಶ್​ಬಾಬು, ಶೈಲೇಂದ್ರ ಇತರರು ಇದ್ದರು.

ರಸ್ತೆ ದುರಸ್ತಿ: ರಾಷ್ಟ್ರೀಯ ಹೆದ್ದಾರಿ&75ರ ಕೆಂಪಲಿಂಗನಹಳ್ಳಿ ಕ್ರಾಸ್​ನಿಂದ ಕಂಬದಕಲ್ಲು ಗ್ರಾಮದವರೆಗೂ ಸುಮಾರು 15 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದ್ದು, ಮುಂದಿನ 2 ತಿಂಗಳಲ್ಲಿ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಶಾಸಕ ಎನ್​.ಶ್ರೀನಿವಾಸ್​ ಮಾಹಿತಿ ನೀಡಿದರು.

ವಿಪಕ್ಷದವರಿಗೆ ಹೊಟ್ಟೆಕಿಚ್ಚು : ೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿದ್ದು, ಕೆಲಸ ಆರಂಭವಾಗುತ್ತಿದೆ. ತಾಲೂಕಿನಲ್ಲಿ ಅಂತರ್ಜಲ ಹೆಚ್ಚಿಸಲು ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಾಲೂಕಿನ 69 ಕೆರೆಗಳಿಗೆ ವೃಷಭಾವತಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗುವುದು. ಆದರೆ, ಇತ್ತೀಚೆಗೆ ವಿಪಕ್ಷದವರು ೇತ್ರದ ಅಭಿವೃದ್ಧಿ ಕಾರ್ಯಗಳನ್ನು ಸಹಿಸಿಕೊಳ್ಳಲಾಗದೇ ಹೊಟ್ಟೆ ಕಿಚ್ಚಿನಿಂದ ಸಾರ್ವಜನಿಕರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಶಾಸಕ ಎನ್​.ಶ್ರೀನಿವಾಸ್​ ಅರೋಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net