ಬಳ್ಳಾರಿ ಚೌಕಿಮಠದ ಮರಿರಾಚೋಟಿ ಮಹಾಸ್ವಾಮೀಜಿ ಸಲಹೆ; ಆಂಧ್ರದಲ್ಲಿ ಕನ್ನಡ ಶಾಲೆ ತೆರೆದು ಕಲಿಕೆಗೆ ಆದ್ಯತೆ ಸಿಗಲಿ

24 Dwd 3
Published on

ವಿಜಯವಾಣಿ ಸುದ್ದಿಜಾಲ ಕರ್ನೂಲ (ಆಂಧ್ರಪ್ರದೇಶ)
ಕರ್ನಾಟಕದಲ್ಲಿ ಉರ್ದು ಮತ್ತು ತೆಲುಗು ಭಾಷಾ ಶಿಕ್ಷಣಕ್ಕೆ ಒತ್ತು ನೀಡಿದಂತೆ ಆಂಧ್ರಪ್ರದೇಶದಲ್ಲಿ ಕನ್ನಡ ಶಾಲೆಗಳನ್ನು ತೆರೆದು ಕಲಿಕೆಗೆ ಆದ್ಯತೆ ನೀಡಬೇಕು ಎಂದು ಬಳ್ಳಾರಿ ಚೌಕಿಮಠದ ಮರಿರಾಚೋಟಿ ಮಹಾಸ್ವಾಮೀಜಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಆಂಧÀ್ರಪ್ರದೇಶದ ಅಧೋನಿಯಲ್ಲಿ ಶನಿವಾರ ಆಯೋಜಿಸಿದ್ದ ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ 9ನೇ ಮಹಾಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಠಗಳೆಂದರೆ ಪೂಜೆ ಪುನಸ್ಕಾರಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ನಾಡಿನಲ್ಲಿ ಕನ್ನಡ ಪ್ರಸಾರಕ್ಕೂ ವಿಶೇಷ ಕೊಡುಗೆ ನೀಡಿವೆ. ಗಡಿ ಭಾಗದಲ್ಲಿನ ಕನ್ನಡ ಕಲಿಯುವ ಮಕ್ಕಳಿಗಾಗಿ ಚೌಕಿಮಠವು ವಸತಿ ಮತ್ತು ಪ್ರಸಾದದ ವ್ಯವಸ್ಥೆ ಮಾಡುವ ಮೂಲಕ ಕನ್ನಡ ಭಾಷೆಯ ಬೆಳವಣಿಗೆಗೆ ಸಹರಿಸಿದೆ. ಇಲ್ಲಿ ಮನೆ ಮಾತು ಕನ್ನಡವಾದರೂ ಮಕ್ಕಳಿಗೆ ಕನ್ನಡ ಕಲಿಯಲು ಶಾಲೆಗಳು ಇಲ್ಲ. ಕರ್ನಾಟಕ ಸರ್ಕಾರ ಈ ಬಗ್ಗೆ ಗಮನ ಹರಿಸಿ ರಾಜ್ಯದ ಗಡಿಗಳಲ್ಲಿ ಕನ್ನಡ ಶಾಲೆಗಳನ್ನು ತೆರೆೆಯಬೇಕು ಎಂದರು.
ಕಾರ್ಯಕ್ರಮ ಉದ್ಧಾಟಿಸಿದ ಬಳ್ಳಾರಿಯ ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ ಮಾತನಾಡಿ, ಕರ್ನಾಟಕದ ಏಕೀಕರಣಕ್ಕೆ ಬಳ್ಳಾರಿಯ ಕೊಡುಗೆ ಅಪಾರ. ಥಾಮಸ್ ಮಂಟ್ರೋ ಏಕೀಕರಣದ ರೂವಾರಿಯಾಗಿದ್ದಾನೆ. ಸ್ವಾತಂತ್ರ‍್ಯ ಮತ್ತು ಏಕೀಕರಣದ ಮೊದಲು ನೆರೆಯ ಭಾಷೆಯಿಂದ ಕನ್ನಡದ ರಕ್ಷಣೆ ಹೇಗೆ ಎನ್ನುವ ಚಿಂತೆ ಕಾಡಿತ್ತು. ಆದರೆ, ಇಂದು ಆಂಗ್ಲ ಭಾಷೆಯಿಂದ ಭಾರತೀಯ ಭಾಷೆಗಳನ್ನು ಹೇಗೆ ರಕ್ಷಿಸಿಕೊಳ್ಳುಬೇಕು ಎನ್ನುವುದು ಕಾಡುತ್ತಿದೆ. ಕರ್ನಾಡಕದ ಗಡಿ ಭಾಗವಾದ ಇಲ್ಲಿ ಹಲವಾರು ಮಹನಿಯರು ಕನ್ನಡದ ನೆಲ,ಜಲ, ಭಾಷೆಗಾಗಿ ಹೋರಾಟ ಮಾಡಿದ್ದಾರೆ ಎಂದರು.
ಬಸವಪ್ರಭು ಹೊಸಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಾ.ನಿ. ಲಕ್ಷಿ÷್ಮÃನರಸಮ್ಮ ಬರೆದ `ಮಾರುತಾತ್ಮಜಂ' ಗ್ರಂಥ ಲೋಕಾರ್ಪಣೆ ಮಾಡಲಾಯಿತು.
ಕಲ್ಮಠದ ಗುರುಸಿದ್ಧ ದೇವರು. ಸಂಘದ ಅಧ್ಯಕ್ಷ ಚಂದ್ರಕಾAತ ಬೆಲ್ಲದ, ಉಪಾಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ಕೆ. ಶರಣಬಸಪ್ಪ, ಕೆ. ಸೂಗೂರಪ್ಪ, ಜಿ. ವೆಂಕಟರಮಣರೆಡ್ಡಿ, ಶ್ರೀನಿವಾಸರೆಡ್ಡಿ ನಾಗನಾಥನಹಳ್ಳಿ, ಬ.ರ. ವೀರಭದ್ರಗೌಡ, ಎಚ್. ಶಿವಶಂಕರಗೌಡ, ಕೆ. ರಾಮು, ತೋವಿ ಶಿವರುದ್ರಪ್ಪ ವೇದಿಕೆಯಲ್ಲಿದ್ದರು.
ವಿ. ಸುಬ್ರಹ್ಮಣ್ಯ ಶರ್ಮಾ ಹಾಗೂ ಶಂಕರ ಹಲಗತ್ತಿ ಸ್ವಾಗತಿಸಿದರು. ಎಚ್.ಎಂ. ವೀರಶ್ರೀ, ಎನ್.ಎಂ. ಚನ್ನಬಸವ ನಿರೂಪಿಸಿದರು. ಶಂಕರ ಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net