

ಇಟಗಿ: ಗುಣಮಟ್ಟದ ಶಿಣ ನೀಡಲು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಿಕನ್ನಡ ಶಾಲೆಗಳನ್ನು ಉಳಿಸಬೇಕಿದೆ ಎಂದು ದಾವಣಗೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾವೀರ ಕರೆಣ್ಣವರ ಹೇಳಿದರು.
ಸಮೀಪದ ಹಿರೇಹಟ್ಟಿಹೊಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನನ್ನ ಶಾಲೆ ನನ್ನ ಜವಾಬ್ದಾರಿ ಹಾಗೂ ಶಾಲೆಯ ವಿವಿಧ ಸಾಧಕರ ಸನ್ಮಾನ ಹಾಗೂ ನಿವೃತ್ತರಾಗಲಿರುವ ಮುಖ್ಯಶಿಕ್ಷಕ ಎಸ್.ಐ. ಹೆಬತ್ತಿ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು. ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯ್ಕ, ಸಿವಿಲ್ ಇಂಜಿನಿಯರ್ ರವೀಂದ್ರ ಗಡಾದ, ದಂಡಾಧಿಕಾರಿ ಸದಾಶಿವ ಮಕ್ಕೋಜಿ ಮಾತನಾಡಿದರು. ಗ್ರಾಪಂ ಅಧ್ಯ ಶ್ರೀಧರ ಲಾವಗಿ, ಎಸ್ಡಿಎಂಸಿ ಅಧ್ಯ ರಾಮಕೃಷ್ಣ ತಡಕೋಡ, ಪ್ರವಿಣ ಮಠಪತಿ, ಡಾ.ಶ್ಯಾಮಲಾ ದಾಸೋಗ, ಪಿ ಎಸ್ಐ ಕೃಷ್ಣವೇಣಿ ಗುರ್ಲಹೊಸೂರ, ಕಲ್ಲಪ್ಪ ತಡಕೋಡ, ಉಪನ್ಯಾಸಕಿ ಭಾರತಿ ದಾಸೋಗ, ಶಂಕರ ಕಮ್ಮಾರ, ಜಯಕುಮಾರ ಹೆಬಳಿ, ಬಿ.ಎಂ. ಯಳ್ಳೂರ ಶಿಕ ವಿವೇಕ ಕುರಗುಂದ ಇತರರು ಇದ್ದರು.