ಕನ್ನಡ ಉಳಿಸುವಲ್ಲಿ ಜನಪದ ಕಲಾವಿದರ ಪಾತ್ರ ಹಿರಿದು

5ckd1
Published on

ಚಿಕ್ಕೋಡಿ: ಗ್ರಾಮೀಣ ಪ್ರದೇಶದ ರೈತಾಪಿ ಜನ ಹಾಗೂ ನಮ್ಮ ಜನಪದ ಕಲಾವಿದರು ಕನ್ನಡ ಭಾಷೆ, ಸಂಸ್ಕೃತಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹಿರಿಯ ಸಾಹಿತಿ ಎಸ್.ವೈ.ಹಂಜಿ ಹೇಳಿದರು.

ತಾಲೂಕಿನ ಧುಳಗನವಾಡಿ ಗ್ರಾಮದಲ್ಲಿ ಸದ್ಗುರು ಶರಣರ ಕಲಾಸೇವಾ ಮಂಡಳ ಧುಳಗನವಾಡಿ, ಅಪ್ಪಾಸಾಬ ಖೋತ ಪರಿವಾರದ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಾಸಿಕ 98ನೇ ಸತ್ಸಂಗ ಚಿಂತನಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಮುಖೋಪಾಧ್ಯಾಯ ಭರತ ಕುಂಬಾರ ಮಾತನಾಡಿದರು. ಸಾವಿತ್ರಿ ವಿಜಯನಗರೆ ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಣ್ಣಾಟ ಕಲಾವಿದೆ ಯಮನಾಬಾಯಿ ಕಲಾಚಂದ್ರ ಹಾಗೂ ಭಜನಾ ಕಲಾವಿದ ಮಲ್ಲಪ್ಪ ಮೊಳಗೆ ಅವರನ್ನು ಸನ್ಮಾನಿಸಲಾಯಿತು.

ಧನಪಾಲ ಕಮತೆ, ವಿಜಯ ವಾಘಮಾರೆ, ಅಪ್ಪಾಸಾಬ ಖೋತ, ಶೈಲಜಾ ಮಠಪತಿ, ಗಜೇಂದ್ರ ಕರೆಪ್ಪಗೋಳ, ಭರತ ಕಲಾಚಂದ್ರ, ಸುಜಾತಾ ಮಗದುಮ್ಮಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net