ಕನ್ನಡ ಉಳಿಸಿ-ಬೆಳೆಸುವುದು ಎಲ್ಲರ ಕರ್ತವ್ಯ

2
ಯಕ್ಕುಂಡಿಯಲ್ಲಿ ಒಲವು ನೆರಳಿನ ಹಾದಿ ಗಜಲ್ ಸಂಕಲನ ಬಿಡುಗಡೆ ಮಾಡಲಾಯಿತು. ವೈ.ಎಂ.ಯಾಕೊಳ್ಳಿ, ಎ.ಬಿ.ಮಿರಜಕರ, ಪ್ರಿಯಾ ಸತ್ತಿಗೇರಿ ಇತರರಿದ್ದರು.
Published on

ಯಕ್ಕುಂಡಿ: ಕನ್ನಡದಲ್ಲೂ ಗಜಲ್ ಸಂಕಲನ ವಿಪುಲವಾಗಿ ಬೆಳಿಯುತ್ತಿದ್ದು, ಓದುಗರ ಮನ ಮುಟ್ಟುತ್ತಿದೆ ಎಂದು ಸವದತ್ತಿ ತಾಲೂಕು ಕಸಾಪ ಅಧ್ಯಕ್ಷ ವೈ.ಎಂ. ಯಾಕೊಳ್ಳಿ ಹೇಳಿದರು.

ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಾಲೇಜು ವಿಭಾಗ ಮತ್ತು ಕಸಾಪ ಘಟಕ ಸವದತ್ತಿ ಸಹಯೋಗದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಉಪನ್ಯಾಸಕ ಶ್ರೀಶೈಲ ಹೆಬ್ಬಳ್ಳಿ ರಚಿಸಿದ ಒಲವು ನೆರಳಿನ ಹಾದಿ ಎಂಬ ಕನ್ನಡ ಗಜಲ್ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಉಪನ್ಯಾಸಕ ಎ.ಬಿ. ಮಿರಜಕರ ಮಾತನಾಡಿ, ಲೇಖಕ ಶ್ರೀಶೈಲ ಹೆಬ್ಬಳ್ಳಿ ಮಾತನಾಡಿದರು. ಆರ್.ಕೆ. ಮುರಮಕರ, ಸಿ.ಎ. ಕುಂಬಾರ, ಪೂರ್ಣಿಮಾ ಖಾನಪೇಠ, ಪ್ರಿಯಾ ಸತ್ತಿಗೇರಿ, ವಿ.ಡಿ. ಮಾಕಾರ, ರವಿ ಛೋಳಕೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net