ಸಾವಿತ್ರಿಬಾಯಿ ಪುಲೆ ಮತ್ತು ಜ್ಯೋತಿ ಬಾ ಪುಲೆ ಪ್ರಶಸ್ತಿ ಪ್ರಕಟ

Chandrashekar Hadapada
Published on

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿ ನೀಡುವ ಸಾವಿತ್ರಿಬಾಯಿ ಫುಲೆ ಹಾಗೂ ಜ್ಯೋತಿ ಬಾ ಫುಲೆ ಪ್ರಶಸ್ತಿಗೆ ನಿವೃತ್ತ ಶಿಕ್ಷಕ ಹಾಗೂ ಕವಿ ಚಂದ್ರಶೇಖರ ಹಡಪದ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು 5 ಸಾವಿರ ನಗದು ಒಳಗೊಂಡಿದೆ. ಸೆ. 8ರಂದು ಬೆಳಿಗ್ಗೆ 11 ಗಂಟೆಗೆ ಎನ್.ಆರ್. ಕಾಲೊನಿಯಲ್ಲಿನ ಬಿ.ಎಂ.ಶ್ರೀ. ಕಲಾಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಲೇಖಕಿ ಕೆ. ಷರೀಫಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮವನ್ನು ಜಾನಪದ ಪರಷತ್ತಿನ ಅಧ್ಯಕ್ಷ ಹಿ.ಚಿ. ಬೋರಲಿಂಗಯ್ಯ ಉದ್ಘಾಟಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷ ಎ.ಎಸ್. ನಾಗರಾಜಸ್ವಾಮಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net