ದಾಸ ಸಾಹಿತ್ಯದಿಂದ ಕನ್ನಡ ಸಮೃದ್ಧಿ

Kannada Samriddhi from Dasa Sahitya
ವಿಜಯಪುರ ಕಸಾಪ ಸಭಾಂಗಣದಲ್ಲಿ ನಡೆದ ಪುರಂದರದಾಸರ ಚಿಂತನಾ ಗೋಷ್ಠಿಯನ್ನು ಡಾ. ವಿ.ಡಿ. ಐಹೊಳೆ ಉದ್ಘಾಟಿಸಿದರು. ಶಾರದಾ ಐಹೊಳ್ಳಿ, ಸುಧೀಂದ್ರ ಕುಲಕರ್ಣಿ, ಜಿ.ಎಸ್. ಬಳ್ಳೂರ ಮತ್ತಿತರರಿದ್ದಾರೆ.
Published on

ವಿಜಯಪುರ: ದಾಸ ಸಾಹಿತ್ಯವು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದೆ. ಕೀರ್ತನೆ, ಸುಳಾದಿ ಮತ್ತು ಉಪಭೋಗಗಳೊಂದಿಗೆ ಹದಿನಾಲ್ಕು ಪ್ರಕಾರದ ಸಾಹಿತ್ಯ ಬೆಳೆಸಿದ ಕೀರ್ತಿ ದಾಸ ಸಾಹಿತ್ಯಕ್ಕೆ ಸಲ್ಲುತ್ತದೆ ಎಂದು ಡಾ. ವಿ.ಡಿ. ಐಹೊಳೆ ಹೇಳಿದರು.

ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕ ಹಾಗೂ ನಗರ ಘಟಕದ ನೇತೃತ್ವದಲ್ಲಿ ಸೋಮವಾರ ನಡೆದ ಪುರಂದರದಾಸರ ಚಿಂತನಾ ಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿ, ಪುರಂದರದಾಸರ ಕೀರ್ತನೆಗಳು ಜನಸಾಮಾನ್ಯರ ಹೃದಯಕ್ಕೆ ತಟ್ಟುವಂತಾಗಿವೆ ಎಂದರು.

ಉಪನ್ಯಾಸಕ ಮಾಧವ ಗುಡಿ ಪುರಂದರದಾಸರ ಜೀವನ ಮತ್ತು ಸಂದೇಶಗಳು ಕುರಿತು ಮಾತನಾಡಿ, ಭಕ್ತಿ ಮಾರ್ಗದಿಂದ ಮೋಕ್ಷ ಪಡೆಯಲು ಸಾಧ್ಯ. ದಾಸರು ನಾಲ್ಕು ಲಕ್ಷಕ್ಕಿಂತ ಹೆಚ್ಚು ಕೀರ್ತನೆಗಳನ್ನು ರಚಿಸುವ ಮೂಲಕ ಅವು ಸಮಾಜದ ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ಕಿತ್ತು ಹಾಕುವಲ್ಲಿ ಯಶಸ್ವಿಯಾಗಿವೆ ಎಂದರು.

ಪುರಂದರದಾಸರ ಕೀರ್ತನೆಗಳ ಸಾರದ ಕುರಿತ ಮಹೆತಾಬ ಕಾಗವಾಡ ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ ಡಾ. ಆನಂದ ಕುಲಕರ್ಣಿ, ಡಾ. ಸಂಗಮೇಶ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಶಾರದಾ ಐಹೊಳ್ಳಿ, ಸುಧೀಂದ್ರ ಕುಲಕರ್ಣಿ, ಜಿ.ಎಸ್. ಬಳ್ಳೂರ, ಸುರೇಶ ಜತ್ತಿ, ಶಿವಾಜಿ ಮೋರೆ, ಲತಾ ವಾಲಿಕಾರ, ಗಂಗಮ್ಮ ರಡ್ಡಿ, ಡಾ. ಸುರೇಶ ಕಾಗಲಕರರಡ್ಡಿ, ಮಹಮ್ಮದ ಮುಲ್ಲಾ ಮತ್ತಿತರರಿದ್ದರು.

ಪ್ರೊ. ಸುಭಾಶ್ಚಂದ್ರ ಕನ್ನೂರ ಸ್ವಾಗತಿಸಿ ಪರಿಚಯಿಸಿದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಅನ್ನಪೂರ್ಣ ಬೆಳ್ಳೆನವರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net