

ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಆಯೋಜನೆ
ಹೊಸಪೇಟೆ: ಕರ್ನಾಟಕ ಸುವರ್ಣ ಸಂಭ್ರಮದ ನಿಮಿತ್ತ ಹೊಸಪೇಟೆಯ ೧೩೦ ಕನ್ನಡ ಹಾಗೂ ಪ್ರಗತಿಪರ ಸಂಘಟನೆಗಳು ಒಗ್ಗೂಡಿಕೊಂಡು ನ.27 ರಂದು ನಗರದಲ್ಲಿ `ಕನ್ನಡ ಸಂಭ್ರಮ-೫೦' ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಪಿ. ವೆಂಕಟೇಶ್ ಹೇಳಿದರು.
ನಗರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ ೬ ಗಂಟೆಗೆ ಹಂಪಿ ಶ್ರೀವಿರೂಪಾಕ್ಷೇಶ್ವರ ದೇವಳ ಆವರಣದಲ್ಲಿರುವ ತಾಯಿ ಭುವನೇಶ್ವರಿ ಸನ್ನಿಧಾನದಿಂದ ಹೊಸಪೇಟೆಯ ವಡಕರಾಯ ದೇವಸ್ಥಾನಕ್ಕೆ ಕನ್ನಡ ಜ್ಯೋತಿ ತರಲಾಗುತ್ತದೆ. ಬೆಳಗ್ಗೆ ೮.೩೦ಕ್ಕೆ ಬೃಹತ್ ಕನ್ನಡ ಶೋಭಾಯಾತ್ರೆ ಆರಂಭವಾಗಲಿದ್ದು, ನಗರದ ವಿವಿಧ ವೃತ್ತಗಳ ಮೂಲಕ ವೆಂಕಟೇಶ್ವರ ಕಲ್ಯಾಣ ಮಂಟಪಕ್ಕೆ ತಾಯಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ. ವಿವಿಧ ಕಲಾ ತಂಡಗಳೊಂದಿಗೆ ಬೃಹತ್ ಶೋಭಾ ಯಾತ್ರೆ ನಡೆಯಲಿದೆ.
ಶ್ರೀ ವೆಂಕಟೆಶ್ವರ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ ೧೧ ಗಂಟೆಗೆ "ಕನ್ನಡ ಸಂಭ್ರಮ-೫೦" ಕರ‍್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಉದ್ಘಾಟಿಸಲಿದ್ದು, ನಗರಸಭೆ ಅಧ್ಯಕ್ಷೆ ಎ. ಲತಾ ಅಧ್ಯಕ್ಷತೆ ವಹಿಸುವರು. ಶಾಸಕ ಎಚ್.ಆರ್. ಗವಿಯಪ್ಪ, ಮಾಜಿ ಸಚಿವ ಆನಂದ ಸಿಂಗ್, ನಗರಸಭೆ ಉಪಾಧ್ಯಕ್ಷ ರೂಪೇಶ್ ಕುಮಾರ, ಸ್ಥಾಯಿ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ ಸೇರಿದಂತೆ ನಗರಸಭೆಯ ಎಲ್ಲ ಸದಸ್ಯರು, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು, ಜಿ.ಪಂ. ಸಿಇಒ ಸದಾಶಿವಪ್ರಭು, ಡಿಎಸ್ಪಿ ತಳವಾರ್ ಮಂಜುನಾಥ, ಪೌರಾಯುಕ್ತ ಬುಡ್ಡಪ್ಪ ಬಂಡಿವಡ್ಡರ್ ಮತ್ತಿತರರು ಮುಖ್ಯಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ವಿವಿಧ ಸಂಘಟನೆಗಳ ತಲಾ ಐವರು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದರನ್ನು ಸನ್ಮಾನಿಸಲಾಗುತ್ತದೆ. ಸರ‍್ವಜನಿಕರಲ್ಲಿ ಕನ್ನಡಪ್ರೇಮವನ್ನು ಬೆಳೆಸುವುದು ಮತ್ತು ಕನ್ನಡ ಪರ ಸಂಘಟನೆಗಳ ಐಕ್ಯತೆಯನ್ನು ಎತ್ತಿಹಿಡಿಯುವುದು ಈ ಕರ‍್ಯಕ್ರಮದ ಉದ್ದೇಶವಾಗಿದೆ. ಪ್ರತೀ ರ‍್ಷ ನ.೨೭ ರಂದು ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗುಜ್ಜಲ ಗಣೇಶ್, ಕಾಸಟ್ಟಿ ಉಮಾಪತಿ, ದಾದಾ ಖಲಂದರ್, ಗಂಟೆ ಸೋಮುಶೇಖರ್, ಷಣ್ಮುಖ, ರಾಜು ಗುಜ್ಜಲ, ಪರಶುರಾಮ, ಗುಂಡಿ ರಮೇಶ್, ಬಸವರಾಜ, ಶಾರಧಾ, ಗುಂಡಿ ಭಾರತಿ, ಜ್ಯೋತಿ, ರ‍್ವಮಂಗಳಾ ಉಪಸ್ಥಿತರಿದ್ದರು.