

ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಮಹಿಳಾ ಸಮಿತಿಯಿಂದ ಶನಿವಾರ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕಲಬುರಗಿ ವಿಭಾಗೀಯ ಕಚೇರಿಯಲ್ಲಿ ಆಯೋಜಿಸಲಾದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಕುವೆಂಪು ತಂಡ ಪ್ರಥಮ ಬಹುಮಾನ ಪಡೆಯಿತು.
ಕಲಬುರಗಿ ಎ.ಪಿ.ಎಂ.ಸಿ. ಕಾರ್ಯದರ್ಶಿ ಶೈಲಜಾ ಅಧ್ಯಕ್ಷತೆಯಲ್ಲಿ ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರತಿ ತಂಡದಲ್ಲಿ 6 ವಿದ್ಯಾರ್ಥಿ ಗಳಂತೆ ಒಟ್ಟು 9 ತಂಡಗಳನ್ನು ರಚಿಸಿ ಪ್ರತಿ ತಂಡಕ್ಕೆ 10 ಪ್ರಶ್ನೆಗಳನ್ನು ಕೇಳಲಾಯಿತು. ಹೆಚ್ಚಿನ ಅಂಕ ಗಳಿಸಿದ ಕುವೆಂಪು ತಂಡ ಪ್ರಥಮ ಬಹುಮಾನ ಪಡೆಯಿತು. ದ್ವಿತೀಯ ಬಹುಮಾನ ಗಿರೀಶ್ ಕಾರ್ನಾಡ್ ತಂಡ ಹಾಗೂ ತೃತೀಯ ಬಹುಮಾನ ಶಿವರಾಮ ಕಾರಂತ್ ತಂಡಕ್ಕೆ ಲಭಿಸಿತು. ಈ ಮೂರು ತಂಡಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ತೀರ್ಪುಗಾರರಾಗಿ ಎಪಿಎಂಸಿ ಸಹಾಯಕ ಕಾರ್ಯದರ್ಶಿ ರಾಜಕುಮಾರ್ ಕೌಡಾಳ ಕಾರ್ಯನಿರ್ವಹಿಸಿದರು. ಮಹಿಳಾ ಸಮಿತಿ ಕಾರ್ಯಧ್ಯಕ್ಷೆ ಓಂಕಾರೇಶ್ವರಿ, ಕೃಷಿ ಮಾರಾಟ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಚಂದ್ರಕಾಂತ ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕಿ ರೇಣುಕಾದೇವಿ, ಸಣ್ಣ ಮತ್ತು ಮಧ್ಯಮ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನಾಧಿಕಾರಿ ಪಾರ್ವತಿ ರೆಡ್ಡಿ, ಸಿಡಿಪಿಓ ತಿಪ್ಪಣ್ಣ ಸಿರಸಗಿ, ಡಾ.ವಿಜಯಲಕ್ಷ್ಮಿ ಕೋಸಗಿ, ರೇಣುಕಾ ಡಾಂಗೆ, ಅರುಣಾ ಹಳ್ಳಿಖೇಡ್, ಕವಿತಾ ಪಾಟೀಲ, ಡಾ.ವಿಜಯಲಕ್ಷ್ಮೀ ಕೋಸಗಿ ಇದ್ದರು.
ಕಲಬುರಗಿಯ ಗುಲ್ಬರ್ಗ ವಿವಿ ಮೈದಾನದಲ್ಲಿ ಸಮ್ಮೇಳನ ಸಿದ್ಧತೆ ಪರಿಶೀಲಿಸಿದ ಸಂಸದ ಡಾ. ಉಮೇಶ ಜಾಧವ್.
ಸಂಸದರಿಂದ ಸಮ್ಮೇಳನದ ಸಿದ್ಧತೆ ಪರಿಶೀಲನೆ
ಕಲಬುರಗಿ: ಸಂಸದ ಡಾ. ಉಮೇಶ ಜಾಧವ್ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಪರಿಶೀಲಿಸಿದರು.
ಮುಖ್ಯ ವೇದಿಕೆ, ವಾಣಿಜ್ಯ ಮತ್ತು ಪುಸ್ತಕ ಮಳಿಗೆ, ಮಾಧ್ಯಮ ಕೇಂದ್ರ, ಪಾಕ ಶಾಲೆ, ವಾಹನ ನಿಲುಗಡೆ ಪ್ರದೇಶ ಪರಿಶೀಸಿದ ಸಂಸದರು ಮುಖ್ಯ ವೇದಿಕೆಯಲ್ಲಿ ಸಿದ್ಧವಾಗುತ್ತಿದ್ದ ರಾಷ್ಟ್ರಕೂಟ ಕೋಟೆಯ ಮಾದರಿ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಾಕಶಾಲೆಯಲ್ಲಿ ಸಿದ್ಧಪಡಿಸಿದ ಸಿಹಿ ತಿನಿಸುಗಳ ಸವಿಯನ್ನು ಸವಿದ ಸಂಸದರು ಎಲ್ಲವೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡುವಂತೆ ಸೂಚಿಸಿದರು ಜಿಲ್ಲಾಧಿಕಾರಿ ಶರತ್ ಬಿ ,ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ. ಪಿ. ರಾಜಾ, ಪ್ರೊಬೇಷನರಿ ಐ.ಎ.ಎಸ್. ಅಧಿಕಾರಿ ಡಾ. ಗೋಪಾಲಕೃಷ್ಣ, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ನಿತೀನ ಗುತ್ತೇದಾರ್ ಹಾಗೂ ಅಧಿಖಾರಿಗಳು ಇದ್ದರು.