ಕಸಾಪ ಪುಸ್ತಕಗಳಿಗೆ ಶೇ.75 ರಿಯಾಯಿತಿ

Kasapa
Published on

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) 111ನೇ ಸಂಸ್ಥಾಪನಾ ದಿನದ ಅಂಗವಾಗಿ ಮೇ ತಿಂಗಳಾದ್ಯಂತ ಶೇ.75ರವರೆಗೆ ರಿಯಾಯಿತಿ ದರದಲ್ಲಿ ತನ್ನ ಪ್ರಕಟಣೆಯ ಕೃತಿಗಳನ್ನು ಮಾರಾಟ ಮಾಡಲಿದೆ. ಪರಿಷತ್ತಿನ ಪ್ರಕಟಣಾ ವಿಭಾಗವು ಇದುವರೆಗೂ 1,800ಕ್ಕೂ ಅಧಿಕ ಪುಸ್ತಕಗಳನ್ನು ಪ್ರಕಟಿಸಿದ್ದು, ಗುಣಮಟ್ಟದಲ್ಲಿ ಅತ್ಯುತ್ತಮವಾಗಿರುವ ಹಾಗೂ ಮಹತ್ವದ ಪುಸ್ತಕಗಳು ರಿಯಾಯಿತಿಯಲ್ಲಿ ದೊರೆಯಲಿವೆ. ಪರಿಷತ್ತಿನ ಕೇಂದ್ರ ಕಚೇರಿಯ ಗಳಗನಾಥ ಮಾರಾಟ ಮಳಿಗೆಯಲ್ಲಿ ನಿತ್ಯ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ಮಳಿಗೆ ತೆರೆದಿರಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕಸಾಪ ಅಧ್ಯಕ್ಷ ಡಾ. ಮಹೇಶ ಜೋಶಿ ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net