ಹರಿಹರದಲ್ಲಿ ಕನ್ನಡ ಭವನಕ್ಕೆ ಸ್ಥಳ ಮಂಜೂರಾತಿಗೆ ಆಗ್ರಹ

Hrr17Manave1
Published on

ಹರಿಹರ: ಕನ್ನಡ ರಾಜ್ಯೋತ್ಸವವನ್ನು ನಗರಸಭೆಯಿಂದ ಆಚರಿಸಲು ಮತ್ತು ಕನ್ನಡ ಭವನ ನಿರ್ವಣಕ್ಕೆ ನಿವೇಶನ ಮಂಜೂರಾತಿಗೆ ಆಗ್ರಹಿಸಿ ಶುಕ್ರವಾರ ಕನ್ನಡ ಸಾಹಿತ್ಯ ಪರಿಷತ್ತಿನ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಯ ಪದಾಧಿಕಾರಿಗಳು ಶಾಸಕ ಬಿ.ಪಿ. ಹರೀಶ್, ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಹಾಗೂ ನಗರಸಭೆ ಪೌರಾಯುಕ್ತ ನಾಗಣ್ಣ ಪರೀಟ್ ಅವರಿಗೆ ಮನವಿ ಸಲ್ಲಿಸಿದರು.

ಈ ವೇಳೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮಾತನಾಡಿ, ನಗರದ ಗುರುಭವನದಲ್ಲಿ ಅ.15 ರಂದು ಕಸಾಪ ನೇತೃತ್ವದಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಸಭೆ ನಡೆಸಿ ತೀರ್ಮಾನ ಮಾಡಿದ ಪರಿಣಾಮ ಮತ್ತೊಮ್ಮೆ ಮನವಿಯನ್ನು ನೀಡಲಾಗುತ್ತಿದೆ ಎಂದರು.

ಸಾಹಿತ್ಯ, ಸಾಂಸ್ಕೃತಿಕ, ಕನ್ನಡಪರ ಚಟುವಟಿಕೆಗಳನ್ನು ನಡೆಸಲು ಹರಿಹರದಲ್ಲಿ ಕನ್ನಡ ಭವನದ ಅಗತ್ಯವಿದೆ. ಈ ಕುರಿತಂತೆ ಹಲವಾರು ಬಾರಿ ನಗರಸಭೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿ ಆಗ್ರಹಿಸಿದ್ದರೂ ಈವರೆಗೆ ಯಾರೂ ಸ್ಪಂದನೆ ಮಾಡಿಲ್ಲ ಎಂದು ಆರೋಪಿಸಿದರು.

ಕಳೆದ ವರ್ಷ ಹರಿಹರದಲ್ಲಿ ನಡೆದ 13ನೇ ಕಸಾಪ ಜಿಲ್ಲಾ ಸಮ್ಮೇಳನದಲ್ಲಿ ಹರಿಹರ ನಗರಕ್ಕೆ ಕನ್ನಡ ಭವನದ ಅಗತ್ಯ ಮನಗಂಡು ನಿರ್ಣಯ ಮಾಡಲಾಗಿದೆ. ಹಾಗಾಗಿ ಕೂಡಲೇ ಒಂದು ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ದಾವಣಗೆರೆ ನಗರದಲ್ಲಿ ನಗರಪಾಲಿಕೆಯಿಂದ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ. ಅದೇ ರೀತಿ ಹರಿಹರ ನಗರಸಭೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಹಿರಿಯ ಸಾಹಿತಿಗಳಾದ ಸಿ.ವಿ. ಪಾಟೀಲ್, ಎಚ್.ಎ. ಭಿಕ್ಷಾವರ್ತಿಮಠ, ಕಾರ್ವಿುಕ ಮುಖಂಡ ಎಚ್.ಕೆ. ಕೊಟ್ರಪ್ಪ, ಹಿರಿಯ ಕ್ರೀಡಾಪಟು ಎಚ್. ನಿಜಗುಣ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಪಾಟೀಲ್, ಕಸಾಪ ತಾಲೂಕಾಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಕಾರ್ಯದರ್ಶಿಗಳಾದ ಬಿ.ಬಿ. ರೇವಣನಾಯ್್ಕ ಎಂ. ಚಿದಾನಂದ ಕಂಚಿಕೇರಿ, ಮಾಜಿ ಅಧ್ಯಕ್ಷ ಎಸ್.ಎಚ್. ಹೂಗಾರ್, ಡಾ.ಡಿ.ಡಿ. ಸಿಂಧಗಿ, ಕೆ.ಬಿ. ರಾಜಶೇಖರ್, ಎ. ರಿಯಾಜ್ ಅಹ್ಮದ್, ವಿ.ಬಿ. ಕೊಟ್ರೇಶ್, ಎ.ಕೆ. ಭೂಮೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net