ಕರ್ನಾಟಕ ಏಕೀಕರಣಕ್ಕಾಗಿ ದುಡಿದ ನಿಸ್ವಾರ್ಥ ರಾಜಕಾರಣಿ ಅಂದಾನಪ್ಪ ದೊಡ್ಡಮೇಟಿ

IMG-20231119-WA0030
Published on

ಗದಗ: ಮದರಾಸು ಬಾಂಬೆ ಮೈಸೂರು ರಾಜ್ಯ ಹೈದ್ರಾಬಾದ ಸಾಂಗ್ಲಿ ಮಿರಜ್ ಜಮಖಂಡಿ ಸೊಂಡೂರ ಸವಣೂರು ಮುಂತಾದ ಪ್ರದೇಶಗಳಲ್ಲಿ ಹಂಚಿಹೋಗಿದ್ದ ಕನ್ನಡ ಆಡಳಿತ ಪ್ರದೇಶಗಳನ್ನು ದೇಸೀಯ ೫೬೨ ಸಂಸ್ಥಾನಮ ರಾಜ್ಯಗಳ ಪುನರ್ ಸಂಘಟನೆಗೆ ೧೯೨೪ ರಿಂದ ೧೯೨೮ ರಲ್ಲಿ ನೆಹರೂ ಸಮಿತಿ ಶಫಾರಸ್ಸು ಮಾಡುವ ಮೂಲಕ ಒಂದುಗೂಡಿಸಿದರು .ಕರ್ನಾಟಕ ಏಕೀಕರಣದ ರೂವಾರಿಗಳಾದ ಆಲೂರ ವೆಂಕಟರಾಯರು ಸಿದ್ದಪ್ಪ ಕಂಬಳಿ ಗುದ್ಲೆಪ್ಪ ಹಳ್ಳೀಕೇರಿ ಎಚ್ ಎಸ್ ದೇಶಪಾಂಡೆ ಗೋರೂರ ರಾಮಸ್ವಾಮಿ ಅಯ್ಯಂಗಾರ ಹೂಯಿಲಗೋಳ ನಾರಾಯಣರಾಯರು ಕೆಂಗಲ್ ಹನುಮಂತಯ್ಯ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ನಿರಂತರ ಹೋರಾಟದ ಫಲದಿಂದ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತೆದು ಸಂಸ್ಕೃತಿ ಚಿಂತಕ ಬರಹಗಾರ ರವೀಂದ್ರನಾಥ ದೊಡ್ಡಮೇಟಿ ನುಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗದಗದಿಂದ ಏರ್ಪಡಿಸಿದ ಕರ್ನಾಟಕ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ವಾರದ ಸಾಹಿತ್ಯ ಸಿಂಚನ ದಲ್ಲಿ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರ ಪಾತ್ರ ಕುರಿತು ಮುಂದುವರೆದು ಮಾತನಾಡುತ್ತ ದೇಶದ ಸ್ವಾತಂತ್ರö್ಯ ಚಳುವಳಿಯಲ್ಲಿ ೨೨ ನೇವಯಸ್ಸಿನಲ್ಲಿ ಅಸಹಕಾರ ಚಳುವಳಿಯಲ್ಲಿ ೧೯೩೩ ರ ‘ಕಾಯಿದೆ ಭಂಗ’ ಭಾಗವಹಿಸಿ ಬಂದಿಸಲ್ಪಟ್ಟರು. ಕನ್ನಡ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿದ್ದ ಇವರು ಕನ್ನಡ ಭುವನೇಶ್ವರಿಯನ್ನು ಸ್ತುತಿಸುವ ‘ಕರ್ನಾಟಕ ಮಹಿಮಾಸ್ತೋತ್ರ’ವನ್ನು ರಚಿಸಿದರು. ಪತ್ರಿಕೊದ್ಯಮಿಯಾಗಿದ್ದ ಇವರು ‘ಕಲ್ಕಿ’ ಎಂಬ ಮಾಸಪತ್ರಿಕೆಯನ್ನು ಹಲವು ವರ್ಷಗಳ ವರೆಗೆ ಗದಗಿನಿಂದ ಪ್ರಕಟಿಸುತ್ತಿದ್ದರು. ಮುಂಬಯಿ ವಿಧಾನಸಭೆಯಲ್ಲಿ ಸ್ವಾತಂತ್ರö್ಯ ಪೂರ್ವದಲ್ಲಿಯೇ ಕನ್ನಡದಲ್ಲಿ ಮಾತನಾಡಿದ ಧೀಮಂತ ವ್ಯಕ್ತಿ ಅಂದಾನಪ್ಪ ದೊಡ್ಡಮೇಟಿಯವರಾಗಿದ್ದರು. ಮೈಸೂರ ರಾಜ್ಯದ ಹೆಸರನ್ನು ಕರ್ನಾಟಕ ಎಂದು ಬದಲಾಯಿಸಲು ವಿಧಾನಸಭೆಯಲ್ಲಿ ಪದೇ ಪದೇ ವಾದಿಸುತ್ತಿದ್ದರು. ಬೆಳಗಾವಿಯಲ್ಲಿ ಕಾಂಗ್ರೇಸ್ ಸಮಾವೇಶ ೧೯೨೪ ರಲ್ಲಿ ನಡೆಯಿತು. ಇಲ್ಲಿ ಕರ್ನಾಟಕ ಏಕೀಕರಣದೆ ಕುರಿತಾದ ಗಂಭೀರ ಚಿಂತನೆಗಳು ನಡೆಯುತ್ತಿದ್ದಂತೆಯೇ ಬೆಳಗಾವಿಯಲ್ಲಿ ಸರ್ ಸಿದ್ದಪ್ಪ ಕಂಬಳಿಯವರ ಅಧ್ಯಕ್ಷತೆಯಲ್ಲಿ ಮೊದಲ ಕರ್ನಾಟಕ ಏಕೀಕರಣ ಸಮಾವೇಶ ನಡೆಯಿತು. ಎಸ್ ನಿಜಲಿಂಗಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿಯು ಕರ್ನಾಟಕದ ವಿವಿಧೆಡೆ ಸಭೆ ನಡೆಸಿತು. ಅಭಿಪ್ರಾಯ ಸಂಗ್ರಹಿಸಿತು. ಅವರಿರುವಾಗ ಕರ್ನಾಟಕ ನಾಮಕರಣವಾಗದೇ ಇರುವುದು ವಿಷಾಧನೀಯವಾಗಿದೆಯೆಂದು ರವೀಂದ್ರನಾಥ ದೊಡ್ಡಮೇಟಿ ನುಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವೇಕಾನಂದಗೌಡ ಪಾಟೀಲ ಕರ್ನಾಟಕ ಏಕೀಕರಣಕ್ಕೆ ದೊಡ್ಡಮೇಟಿ ಕುಟುಂಬದ ಕೊಡುಗೆ ದೊಡ್ಡದು. ಮಹಾತ್ಮಾ ಗಾಂಧಿಯಿವರನ್ನು ಜಕ್ಕಲಿಯಂಥ ಪುಟ್ಟ ಗ್ರಾಮಕ್ಕೆ ಕರೆ ತಂದ ಕೀರ್ತಿ ಈ ಕುಟುಂಬಕ್ಕಿದೆ. ರೋಣ ವಿಧಾನಸಭಾ ಕ್ಷೇತ್ರವನ್ನು ೫ ಬಾರಿ ಇವರ ಕುಟುಂಬವೇ ಪ್ರತಿನಿಧಿಸಿತ್ತು ಅಂಥ ಮಹಾನ್ ನಾಯಕನ ಸ್ಮಾರಕವನ್ನು ನಿರ್ಮಾಣ ಮಾಡುವ ಹೊಣೆಯನ್ನು ರಾಜ್ಯ ಸರಕಾರ ವಹಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.ಕರ್ನಾಟಕದ ಇಡೀ ಚಿತ್ರಣವನ್ನು ಕಲ್ಪನೆಯಲ್ಲಿರಿಸಿಕೊಂಡು ಭುವನೇಶ್ವರಿಯ ತೈಲವರ್ಣದ ಚಿತ್ರವನ್ನು ಚಿತ್ರಕಲಾವಿದ ಸಿ.ಎನ್.ಪಾಟೀಲರಿಂದ ತೆಗೆಸಿ ಇಂದಿಗೂ ಅದನ್ನು ಜಕ್ಕಲಿಯ ತಮ್ಮ ಮನೆಯಲ್ಲಿ ಪೂಜೆಗೊಳ್ಳುವಂತೆ ಮಾಡಿರುವುದರ ಹಿಂದೆ ಕರ್ನಾಟಕದ ಕೆಚ್ಚಿನ ಮೆಚ್ಚಿನ ಕಥೆಯಿದೆಯೆಂದರು.
ವೇದಿಕೆ ಮೇಲೆ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ರವೀಂದ್ರ ದೊಡ್ಡಮೇಟಿ ಗೌರವ ಕಾರ್ಯದರ್ಶಿ ಶಿವಾನಂದ ಗಿಡ್ನಂದಿ ಕಿಶೋರಬಾಬು ನಾಗರಕಟ್ಟಿ ಸಹಕಾರ್ಯದರ್ಶಿಗಳಾದ ಡಾ. ದತ್ತಪ್ರಸನ್ನ ಪಾಟೀಲ ಶ್ರೀಕಾಂತ ಬಡ್ಡೂರ ದಾನಯ್ಯ ಗಣಾಚಾರಿ ಜನಪದ ಕಲಾವಿದ ಶಂಕ್ರಣ್ಣ ಸಂಕಣ್ಣವರ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಗೋಡಬೋಲೆ ಪ್ರೊ. ಕೆ ಎಚ್ ಬೇಲೂರ ಪ್ರೊ ಸಿದ್ದಲಿಂಗೇಶ ಸಜ್ಜನಶೆಟ್ಟರ ಅಜಿತ್ ಘೋರ್ಪಡೆ ಡಾ.ಅಶೋಕ ಮತ್ತಿಗಟ್ಟಿ ಡಾ. ಶಂಕರ ಬಾರಿಕೇರ ಡಾ.ನಾಗಪ್ಪ ಸುರಳಿಕೇರಿ ಎಂ ಎಚ್ ಸವದತ್ತಿ ಪ್ರೊ.ಬಿ ಬಿ ಪಾಟೀಲ ಸುರೇಶ ಕುಂಬಾರ ಲಿಂಗರಾಜ ಪಾಟೀಲ ರಕ್ಷಿತಾ ಗಿಡ್ನಂದಿ ಶೈಲಜಾ ಗಿಡ್ನಂದಿ ರತ್ನಾ ಪುರಂತರ ಜಯಶ್ರೀ ಅಂಗಡಿ ರತ್ನಕ್ಕ ಪಾಟೀಲ ಶ್ರೀಮತಿ ಎಂ ವಿ ಕಲಹಾಳ ಎಂ ಎಂ ಶೆಟವಾಜಿ ಮಹಾಂತೇಶ ಬಾತಾಖಾನಿ ಸಿ ಎಂ ಮಾರನಬಸರಿ ಚನ್ನವೀರಸ್ವಾಮಿ ಹಿರೇಮಠ(ಕಡಣಿ) ಬಸವರಾಜ ತೋಟಗೇರ ಬಿ ಬಿ ಹಡಪದ ಎಸ್ ಎ ಆವಾರಿ ರಾಜಶೇಖರ ಕರಡಿ ಬಸವರಾಜ ನೆಲಜೆರಿ ಎಸ್ ಸಿ ಹಾಲಕೇರಿ ಪ್ರ ತೋ ನಾರಾಯಣಪುರ ಬಿ ಎಸ್ ಹಿಂಡಿ ಈರನಗೌಡ ಮಣಕವಾಡ ಎಂ ಎಚ್ ಹುಲ್ಲೂರ ಅಶೋಕ ಸತ್ಯರಡ್ಡಿ ಎಂ ವಿ ಕೆಂಬಾವಿಮಠ ಈಶ್ವರ ಕುರಿ ಹಾಶೀಮಸಾಬ ಆಲೂರ ಗು ಅ ಪಾಟೀಲ ಎಚ್ ಟಿ ಸಂಜೀವಸ್ವಾಮಿ ಹಾಜರಿದ್ದರು.
ಪ್ರಾರಂಭದಲ್ಲಿ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.ಡಾ.ದತ್ತಪ್ರಸನ್ನ ಪಾಟೀಲ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು.ಕಿಶೋರಬಾಬು ನಾಗರಕಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net